ಮರ ಬೆಳೆಸುವವರಿಗೆ ವರುಷ ಕಡಿಯುವವರಿಗೆ ನಿಮಿಷ

ನೆಟ್ಟು ಬೆಳೆಸಿದ ಮರಗಳನ್ನು ಕಡಿದರೆ ಪ್ರತಿಭಟನೆ ನಡೆಸಬೇಕಾದೀತು ಎಂಬುದಾಗಿ ಸಹ್ಯಾದ್ರಿ ಸಂಚಯ ಇತ್ತೀಚೆಗೆ ಎಚ್ಚರಿಕೆ ನೀಡಿರುವುದು ಸರಿಯಾಗಿಯೇ ಇದೆ ವನ ಮಹೋತ್ಸವ ಸಂದರ್ಭ ಅರಣ್ಯ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ರಸ್ತೆ ಬದಿ ಅಥವಾ ಜಾಗ ಇರುವಲ್ಲಿ ಮರಗಳನ್ನು ನೆಟ್ಟು ಬೆಳೆಸುತ್ತಾರೆ ಆದರೆ ಅವು ಚೆನ್ನಾಗಿ ಬೆಳೆದು ರೆಂಬೆ ಕೊಂಬೆಗಳು ಹರಡಿರುವುದರಿಂದ ಅವರ ಅಂಗಡಿಗೆ ಅಡ್ಡವಾಗುತ್ತವೆ ಎಂಬ ದೃಷ್ಟಿಯಿಂದ ಅವುಗಳ ರೆಂಬೆಕೊಂಬೆಗಳನ್ನು ಕಡಿದು ಈಗಿನ ಯುವಜನರು ತಲೆಕ್ರಾಪ್ ಮಾಡಿದಂತೆ ಬೋಳು ಮಾಡುತ್ತಾರೆ. ಇದು ಬಲ್ಮಠ ಮಾತ್ರವಲ್ಲ ನಗರದ ಕೆಲವು ಪ್ರದೇಶಗಳಲ್ಲಿ ರಸ್ತೆ ಬದಿಯ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುತ್ತಾರೆ. ಪರಿಣಾಮ ನಾಲ್ಕೈದು ವರ್ಷದ ಮರಗಳು ಸೊರಗಿ ಹೋಗಿ ಸಾಯುತ್ತವೆ ಇಂತಹ ಪ್ರಕರಣ ವೆಲೆನ್ಸಿಯಾ ಪಾರ್ಕ್ ರಿಕ್ಷಾ ಬಳಿ ಜೊಸೆಫ್ ನಗರ, ಜೆಪ್ಪು, ಕ್ರಿಕೆಟ್ ಗ್ರೌಂಡಿನ ಬದಿಯಲ್ಲಿನ ಮರಗಳ ಮೇಲೆ ಕೊಡಲಿಯೇಟು ಬಿದ್ದಿದೆ ಫಾ ಮುಲ್ಲರ್ಸ್ ರಸ್ತೆ ಬದಿಯಲ್ಲಿನ 45-50 ಮರಗಳನ್ನು ರಸ್ತೆ ವಿಸ್ತರಣೆಗಾಗಿ ಕಡಿಯಲಾಗಿದೆ ಎಲ್ಲರೂ ಮರಕಡಿಯಬಾರದಾಗಿ ಮಾತಾಡುವವರೇ. ಆದರೆ ಅವುಗಳನ್ನು ಸಂರಕ್ಷಿಸುವುದರ ಬಗ್ಗೆ ಯಾರಿಗೂ ಕಾಳಜಿ ಇದೆ ಎಂಬ ಬಗ್ಗೆ ಕಾಣುವುದಿಲ್ಲ. ಇವೆಲ್ಲಾ ಪೊಳ್ಳು ಮಾತುಗಳಲ್ಲದೆ ಮತ್ತೇನು ಹೀಗೆಯೇ ಮರದ ರೆಂಬೆ-ಕೊಂಬೆಗಳನ್ನ ಕಡಿದು ಅವುಗಳ ಇತಿಹಾಸವನ್ನು ಮುಗಿಸುವವರ ಬಗ್ಗೆ ನೋಡಿದವರು ಅರಣ್ಯ ಅಧಿಕಾರಿಗೆ ದೂರು ಕೊಡಬಹುದಲ್ಲವೇ

  • ಜೆ ಎಫ್ ಡಿಸೋಜ  ಅತ್ತಾವರ