ಶೀಘ್ರವೇ ಯಾಸಿನ್ ಭಟ್ಕಳ ತಿಹಾರ ಜೈಲಿಗೆ

ಹೈದರಾಬಾದ್ : ಮರಣದಂಡನೆಗೊಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸ್ಥಾಪಕ ಯಾಸಿನ್ ಭಟ್ಕಳ, ಅಸದುಲ್ಲ ಅಖ್ತರ್, ಝಿಯಾ-ಉರ್-ರೆಹಮಾನ್  ತಹಸೀನ್ ಅಖ್ತರ್ ಮತ್ತು ಅಝೀಝ್ ಸಾಯೀದ್ ಶೇಕ್ ಶೀಘ್ರವೇ ಇಲ್ಲಿನ ಚೆರ್ಲಪಳ್ಳಿ ಜೈಲಿನಿಂದ ತಿಹಾರ್ ಜೈಲಿಗೆ ಸ್ಥಳಾಂತರಗೊಳ್ಳಲಿದ್ದಾರೆ  ಇಲ್ಲಿನ ದಿಲ್ಖುಶ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಹಾಗೂ ದೇಶದ ವಿಭಿನ್ನ ಕಡೆಗಳಲ್ಲಿ ನಡೆದಿದ್ದ ಕೆಲವು ಇಂತಹ ಸ್ಫೋಟದ ಹಿಂದೆ ಈ ಐವರು ಶಾಮೀಲಾಗಿರುವುದು ಸಾಬೀತಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿಲ್ಲಿ ಬಿಹಾರ ಮತ್ತು ಕರ್ನಾಟಕದ ಎನ್ ಐ ಎ ಕೋರ್ಟುಗಳಲ್ಲಿ ವಿಚಾರಣೆ ಮುಂದುವರಿದಿದೆ
1950ರ ಕೈದಿಗಳ ವರ್ಗಾವಣೆ ಕಾಯ್ದೆಯ ಸೆಕ್ಷನ್ 3ರಂತೆ ಈ ಐವರನ್ನು ಎನ್‍ಐಎ ಸ್ಥಳಾಂತರಿಸಲಿದೆ. ಇವರ ವಿರುದ್ಧ ಇನ್ನೂ ಕೆಲವು ರಾಜ್ಯಗಳಲ್ಲಿ ವಿಚಾರಣೆ ನಡೆಯಬೇಕಿದೆ. ಈ ಸೆಕ್ಷನಿನ ಪ್ರಕಾರ  ಇಂತಹ ಕೈದಿಗಳನ್ನು ಇತರ ಯಾವುದೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಅಧಿಕ ಭದ್ರತೆಯೊಂದಿಗೆ ಸ್ಥಳಾಂತರ ಮಾಡಿಕೊಳ್ಳುವ ಅವಕಾಶ ರಾಜ್ಯ ಸರ್ಕಾರಕ್ಕಿದೆ
ಎಲ್ಲ ಐವರು ಅಪರಾಧಿಗಳನ್ನೀಗ ಇಲ್ಲಿನ ಚೆರ್ಲಪಳ್ಳಿ ಜೈಲಿನಲ್ಲಿ ಕೂಡಿಹಾಕಲಾಗಿದೆ. ಒಂದೊಮ್ಮೆ ಯಾವುದೇ ಕೈದಿ ಕೋರ್ಟೊಂದರಿಂದ ಮರಣದಂಡಣೆ ತೀರ್ಪು ಪಡೆದಲ್ಲಿ ಅಥವಾ ಆತನ ವಿರುದ್ಧ ಕೆಲವು ಪ್ರಕರಣದ ತನಿಖೆ ಬಾಕಿ ಇದ್ದಲ್ಲಿ  ಪೊಲೀಸರು ಅಂತಹ ಪ್ರಕರಣಗಳ ತನಿಖೆ ತ್ವರೆಗೊಳಿಸಬೇಕಾಗುತ್ತದೆ ಎಂದು ನಿವೃತ್ತ ಹೆಚ್ಚುವರಿ ಎಸ್ಪಿ ರೆಡ್ಡಣ್ಣ ಹೇಳಿದ್ದಾರೆ
ಸುಪ್ರೀಂ ಕೋರ್ಟ್ ಅಥವಾ ರಾಷ್ಟ್ರಪತಿಯಿಂದ ಕ್ಷಮಾದಾನ ಅರ್ಜಿ ವಜಾಗೊಂಡರೂ  ಮರಣದಂಡನೆಗೊಳಗಾಗಿರುವ ಅಪರಾಧಿಗಳ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳ ವಿಚಾರಣೆ ಮುಂದುರಿಯಲಿದೆ  ಎಂದವರು ವಿವರಿಸಿದರು