ಅಮೆರಿಕಾದಲ್ಲಿ ಯಶ್-ರಾಧಿಕಾ ಪ್ರೇಮಿಗಳ ದಿನಾಚರಣೆ

ಚಂದನವನದ ಚೆಂದದ ಜೋಡಿ ಈ ವರ್ಷದ `ವ್ಯಾಲೆಂಟೈನ್ ಡೇ’ಯನ್ನು ಅಮೆರಿಕಾದಲ್ಲಿ ಆಚರಿಸಿದ್ದಾರೆ. ರಾಧಿಕಾ ಕೆಲದಿನಗಳ ಹಿಂದೆಯೇ ಆಕೆಯ ಅಪ್ಪ-ಅಮ್ಮನ ಜೊತೆ ಚಿಕಾಗೋನಲ್ಲಿರುವ ತನ್ನ ಸಹೋದರನ ಮನೆಗೆ ತೆರರಳಿದ್ದಳು. ಅಲ್ಲಿ ಸಹೋದರನಿಗೆ ಮಗುವಾಗಿದ್ದು ಆ ಮಗುವಿನ ಜೊತೆಗಿನ ಫೊಟೋವನ್ನೂ ಈ ಹಿಂದೆ ಅಪ್ಲೋಡ್ ಮಾಡಿದ್ದಳು. ಇದೀಗ ಬಹಳ ಬ್ಯೂಸಿ ಶೆಡ್ಯೂಲಿನ ನಡುವೆಯೂ ಯಶ್ ಸಮಯ ಹೊಂದಿಸಿಕೊಂಡು ಅಮೆರಿಕಾಗೆ ಹಾರಿದ್ದಾನೆ.

ಯಶ್ ತನ್ನ ಮನದನ್ನೆಯನ್ನು ಬಹಳ ಮಿಸ್ ಮಾಡಿಕೊಂಡಿದ್ದು ಅಂತೂ ಪ್ರೇಮಿಗಳ ದಿನವನ್ನು ಜೊತೆಯಲ್ಲಿಯೇ ಕಳೆಯಬೇಕೆನ್ನುವ ಮಹದಾಸೆಯೊಂದಿಗೆ ಸಪ್ತಸಾಗರಗಳನ್ನು ದಾಟಿ ಮೊನ್ನೆಯೇ ಪತ್ನಿಯನ್ನು ಸೇರಿಕೊಂಡಿದ್ದಾನೆ.

 

LEAVE A REPLY