ಅರ್ಜುನ್ ರೆಡ್ಡಿಯಾಗಿ ಯಶ್ ?

ಅಗಸ್ಟ್ ಕೊನೆಯಲ್ಲಿ ಟಾಲಿವುಡ್ಡಿನಲ್ಲಿ ರಿಲೀಸ್ ಆಗಿ ಹಿಟ್ ಚಿತ್ರವೆನಿಸಿಕೊಂಡ `ಅರ್ಜುನ್ ರೆಡ್ಡಿ’ ಸಿನಿಮಾ ಕನ್ನಡದಲ್ಲೂ ಬರುತ್ತಿದೆ. ಕನ್ನಡದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದ ಪಾತ್ರದಲ್ಲಿ ಯಶ್ ನಟಿಸಲಿದ್ದಾನೆ ಎನ್ನುವ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ.

ಈಗಾಗಲೇ `ಅರ್ಜುನ್ ರೆಡ್ಡಿಯ’ ತಮಿಳು ಸಿನಿಮಾ ಮಾಡಲು ರಿಮೇಕ್ ಹಕ್ಕನ್ನು ಧನುಶ್ ಪಡೆದಿದ್ದಾರೆ. ಕನ್ನಡ ಚಿತ್ರ ಮಾಡುವುದಕ್ಕೋಸ್ಕರ ದೊಡ್ಡ ಮೊತ್ತ ನೀಡಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆ ಹಕ್ಕು ಪಡೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ವೆಂಕಟೇಶ್ ಈ ಚಿತ್ರಕ್ಕಾಗಿ ಯಶ್ ಸಂಪರ್ಕಿಸಲಿದ್ದಾರೆ ಎನ್ನಲಾಗಿದೆ. ಯಶ್ ಸ್ಟೈಲಿಗೆ ಅರ್ಜುನ್ ರೆಡ್ಡಿ ಸಿನಿಮಾ ಹೊಂದಿಕೆಯಾಗುತ್ತದೆ ಎನ್ನುವುದು ವೆಂಕಟೇಶ್ ಅಭಿಮತ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ.