1000 ಕಿ ಮೀ ಪಾದಯಾತ್ರೆಯಲ್ಲಿ ಸಾಗಿದ ಜೆಡಿಎಸ್ಸಿನ ವೈಎಸ್ವಿ ದತ್ತಾ

ಗುರುವಾರದಂದು ಪೂರ್ಣ ಗೌಡನಕಟ್ಟೆ ಹಳ್ಳಿಯ ಜನರು ಜೆಡಿಎಸ್ ಶಾಸಕ ವೈಎಸ್ವಿ ದತ್ತಾರ ಮಾತು ಕೇಳಲು ಆಂಜನೇಯ ದೇವಸ್ಥಾನದ ಬಳಿ ಸೇರಿದ್ದರು. ಮೊದಲನೆಯದಾಗಿ ಇದು ಚುನಾವಣಾ ಪ್ರಚಾರವಾಗಿರಲಿಲ್ಲ. ಎರಡನೆಯದಾಗಿ ದತ್ತಾ 950 ಕಿ ಮೀ.ಗಳವರೆಗೆ ಪಾದಯಾತ್ರೆಯನ್ನು ನಡೆಸಿ ಈ ಹಳ್ಳಿಗೆ ಆಗಮಿಸಿದ್ದರು.

ಮೊದಲ ಬಾರಿ ಶಾಸಕರಾಗಿರುವ ಕಡೂರಿನ ವೈಎಸ್ವಿ ದತ್ತಾ ಜೂನ್ 4ರಿಂದ ತಮ್ಮ ವಿಧಾನಸಭಾ ಕ್ಷೇತ್ರದುದ್ದಕ್ಕೂ 1000 ಕಿ ಮೀ.ಗಳಷ್ಟು ದೂರ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರು ಕ್ಷೇತ್ರವಿಡೀ ಸುತ್ತಾಡಿ ಗ್ರಾಮಸ್ಥರ ಜೊತೆಗೆ ಮಾತನಾಡಿದ್ದಾರೆ. ಆಗಸ್ಟ್ 12ರಂದು ಅವರು 1000 ಕಿ ಮೀ ದೂರದ ಗಡಿಯನ್ನು ದಾಟಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶವೂ ಇಟ್ಟುಕೊಂಡಿದ್ದರು.

“ವಿಧಾನಸಭಾ ಕ್ಷೇತ್ರದ ಜನರನ್ನು ಪರಿಚಯ ಮಾಡಿಕೊಳ್ಳುವ ಜೊತೆಗೆ ಸ್ವತಃ ಜನರ ಕಷ್ಟಗಳನ್ನು ತಿಳಿದುಕೊಳ್ಳುವ ಪರೀಕ್ಷೆ ಈ ಪಾದಯಾತ್ರೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನರ ಜೊತೆಗೆ ಸಂಪರ್ಕ ಕಲ್ಪಿಸುವ ಅವಕಾಶ ನನಗೆ ಸಿಕ್ಕಿದ್ದು ಅದೃಷ್ಟ. ತಡರಾತ್ರಿಯಲ್ಲೂ ಜನರು ನನಗಾಗಿ ಕಾಯುತ್ತಿದ್ದರು. ಆಹಾರ ಮತ್ತು ಮಲಗಲು ಜಾಗ ಕೊಡುತ್ತಿದ್ದರು” ಎನ್ನುತ್ತಾರೆ ದತ್ತಾ.

ದತ್ತಾರ ಭೇಟಿಯ ಸಂದರ್ಭ ಪ್ರಶಂಸೆ ಮತ್ತು ಟೀಕೆ ಎರಡೂ ವ್ಯಕ್ತವಾಗುತ್ತಿತ್ತು. ಗೌಡನಕಟ್ಟೆ ಹಳ್ಳಿ ಜನರೂ ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ಹೇಳಿಕೊಂಡಿದ್ದಾರೆ. ಕೆಲವರು ಖಾಸಗಿ ಸಮಸ್ಯೆಗಳಿಗೆ ಪರಿಹಾರ ಕೇಳಿ ಪಡೆಯದೆ ಇದ್ದಾಗ ಬೇಸರ ವ್ಯಕ್ತಪಡಿಸಿದ್ದೂ ಇದೆ.

ದಿನಕ್ಕೆ 25ರಿಂದ 30 ಕಿ ಮೀ ದೂರದವರೆಗೆ ದತ್ತಾ ಪ್ರಯಾಣಿಸಿದ್ದಾರೆ. ದಾರಿ ಮಧ್ಯೆಯೇ ಊಟ, ನಿದ್ದೆಯನ್ನು ಪೂರೈಸಿದ್ದಾರೆ. 2013ರಲ್ಲಿ ದತ್ತಾ ದೊಡ್ಡ ಅಂತರದಲ್ಲಿ ಕಡೂರಿನಿಂದ ಗೆದ್ದು ಬಂದಿದ್ದರು.