ತಡರಾತ್ರಿ ನಡುರಸ್ತೆಯಲ್ಲಿ ಕುಣಿಯುವುದು ಸರಿಯಲ್ಲ

ಹೊಸ ವರ್ಷಾಚರಣೆ ಸಂದರ್ಭ ಸಿಲಿಕಾನ್ ಸಿಟಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವಿಷಾದನೀಯ  ಈ ಬಗ್ಗೆ ಈಗ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ  ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯ ಅವರ ದೃಷ್ಟಿಕೋನಕ್ಕೆ ತಕ್ಕಂತೆ ವ್ಯಕ್ತಪಡಿಸಿದ್ದಾರೆ
ಆದರೆ ಇಂತಹ ದೌರ್ಜನ್ಯ ನಡೆಯಲು ಮೂಲಕಾರಣ ಹುಡುಕಬೇಕಾಗಿದೆ  ರಾತ್ರಿ ಹನ್ನೆರಡರ ನಂತರವೂ ಪಾರ್ಟಿ ಮಾಡುತ್ತಾ ಮಜಾ ಮಾಡುವ ಅಗತ್ಯ ಇದೆಯೇ   ನಡುರಸ್ತೆಯಲ್ಲಿ ತಡರಾತ್ರಿಯಲ್ಲಿ ಕುಣಿಯುವುದೇ ಸಂಭ್ರಮಾಚರಣೆಯೇ   ಇಂತಹ ಕೆಲ ಪ್ರಶ್ನೆಗಳನ್ನು ನಮ್ಮ ಯುವಕ ಯುವತಿಯರು ತಮಗೆ ತಾವೇ ಹಾಕಿಕೊಳ್ಳಬೇಕು  ಅಸಹಾಯಕರಿಗೆ ಸಹಾಯ ಮಾಡುವುದೋ  ಆಸ್ಪತ್ರೆಗಳಿಗೆ ಹೋಗಿ ರೋಗಿಗಳ ಸೇವೆ ಮಾಡುವುದೋ ಅಥವಾ ಮನೆಯಲ್ಲಿ ಹೆತ್ತವರಿಗೆ ಏನಾದರೂ ಖುಷಿಯಾಗುವಂತಹ ಕೆಲಸ ಮಾಡುವುದೋ ಇಂತಹ ಅರ್ಥಪೂರ್ಣ ಕಾರ್ಯ ಮಾಡಿ ಸಂಭ್ರಮಿಸಬೇಕು  ಒಟ್ಟಿನಲ್ಲಿ ಸಂಭ್ರಮದಲ್ಲೂ ಸಂವೇದನೆ  ಸುವಿಚಾರಗಳು ಇರಬೇಕೆನ್ನುವುದನ್ನು ಮರೆಯಬಾರದು

  • ಟಿ ಆಕಾಶ್ ದೇವಾಡಿಗ
    ಕಿನ್ನಿಮುಲ್ಕಿ ಉಡುಪಿ