1962ರ ಚೀನಾ ಜತೆ ಯುದ್ಧದಲ್ಲಿ ಭಾರತದ ಗೆಲುವು : ಮ ಪ್ರ ಪಠ್ಯದಲ್ಲಿ ಸುಳ್ಳು ಮಾಹಿತಿ

ಭೂಪಾಲ್ : ಮಧ್ಯಪ್ರದೇಶದ ಸಿಬಿಎಸ್‍ಇ ಶಾಲೆಗಳಲ್ಲಿನ ಸಂಸ್ಕøತ ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನೇ ತಿರುಚಲಾಗಿದ್ದು 1962ರಲ್ಲಿ ಚೀನಾ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿತ್ತು ಎಂದು ಹೇಳಲಾಗಿದೆ. ಸಂಸ್ಕøತ ಪಠ್ಯ ಪುಸ್ತಕ ಸುಕ್ರುತಿಕಾದ ಮೂರನೆಯ ಸಂಪುಟದ್ಲಿನ ಎಂಟನೆಯ ಅಧ್ಯಾಯದಲ್ಲಿ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಾಧನೆಗಳನ್ನು ಕುರಿತ ಪಾಠದಲ್ಲಿ ಈ ಪ್ರಮಾದ ನುಸುಳಿದೆ.

ಈ ಯುದ್ಧದಲ್ಲಿ ಚೀನಾ ಕದನ ವಿರಾಮ ಘೋಷಿಸುವ ಮೂಲಕ ಗೆಲುವು ಸಾಧಿಸಿತ್ತು. ಚೀನಾ ಮತ್ತು ಭಾರತ ಮತ್ತೊಮ್ಮೆ ಯುದ್ಧದ ವಾತಾವರಣ ನಿರ್ಮಿಸಿರುವ ಸಂದರ್ಭದಲ್ಲೇ ಈ ಪಠ್ಯದಲ್ಲಿ ಪ್ರಮಾದ ನುಸುಳಿದೆ. ಚೀನಾದ ಮಾಧ್ಯಮಗಳು ಭಾರತದ ಸೋಲನ್ನು ಕುರಿತು ಸಾಕಷ್ಟು ಮಾಹಿತಿಯನ್ನು ಪ್ರಕಟಿಸಿದ್ದು, ಈ ಯುದ್ಧದಿಂದ ಪಾಠ ಕಲಿತಿರುವ ಭಾರತ ಪ್ರಸ್ತುತ ಸಂದರ್ಭದಲ್ಲಿ ಸಮರಕ್ಕೆ ಸಿದ್ಧವಾಗಿದೆ ಎಂದು ಅರುಣ್ ಜೈಟ್ಲಿ ಹೇಳಿದ್ದಾರೆ. ಆದರೆ ಇಂತಹ ತಪ್ಪು  ಮಾಹಿತಿಯನ್ನು ಸಾವಿರಾರು ವಿದ್ಯಾರ್ಥಿಗೆ ತಲುಪಿಸುವ ಶಾಲಾ ಪಠ್ಯದ ¨ಗ್ಗೆ ದೇಶದ ಪ್ರಮುಖ ವಿದ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಹತ್ತನೆ ತರಗತಿಯ ಪಠ್ಯದಲ್ಲೂ ಸಹ ಹಲ್ದಿಘಾಠಿ ಯುದ್ಧದಲ್ಲಿ ಅಕ್ಬರ್ ವಿರುದ್ಧ ರಾಣಾ ಪ್ರತಾಪ್ ಜಯ ಗಳಿಸಿದ್ದ ಎಂಬ ತಪ್ಪು ಮಾಹಿತಿಯನ್ನು ನೀಡಲಾಗಿತ್ತು.