ಲೋಕದ ಮಾತುಗಳಿಂದ ಭಯವೇ ? ಇಲ್ಲಿವೆ ಅವರನ್ನೆದುರಿಸಲು ಏಳು ಸೂತ್ರ

ಜನರು ಒರಟಾಗಿ ವರ್ತಿಸಿದಾಗ ನೀವು ತಾಳ್ಮೆಯಿಂದಿರಿ, ಅವರ ಬಗ್ಗೆ ಅನುಕಂಪ ತೋರಿಸಿ.

ಈ ಲೋಕದಲ್ಲಿ ನಾನಾ ವಿಧದ ಜನರಿದ್ದಾರೆ. ಎಲ್ಲರೂ ಒಬ್ಬರನ್ನೊಬ್ಬರ ಕುರಿತಾಗಿ ಏನನ್ನಾದರೂ ಹೇಳುತ್ತಲೇ ಇರುತ್ತಾರೆ. ಆದರೆ ಇತರರು ಹೇಳುವುದೆಲ್ಲಾ ತಮ್ಮ ಬಗ್ಗೆಯೇ ಎಂದು ಅಂದುಕೊಳ್ಳುವವರು ನಮ್ಮಲ್ಲಿ ಹಲವರಿದ್ದಾರೆ.

ಆದರೆ ಇತರರು ಏನು ಹೇಳಿದರೂ ಅದು ಅವರಿಗೆ ಸಂಬಂಧಿಸಿದ್ದೇ ಹೊರತು ನಮಗಲ್ಲ. ಜನರು ಹೆಚ್ಚಾಗಿ ತಮ್ಮ ದೃಷ್ಟಿಕೋನ, ತಮ್ಮ ನೋವು ಹಾಗೂ  ಅನುಭವಗಳ ಆಧಾರದಲ್ಲಿಯೇ ಮಾತನಾಡುತ್ತಾರೆ. ನೀವು ಅತ್ಯುತ್ತಮ ಮನುಷ್ಯರು ಅಥವಾ ನೀಚರು ಎಂದು ಅವರಂದುಕೊಂಡಲ್ಲಿ ಅದು ಅವರ ಅಭಿಪ್ರಾಯವೇ ಹೊರತು ಅದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲವೆಂದು ನೀವು ಮೊದಲು ಅರಿಯಬೇಕು.

ಇಂತಹ ಸಂದರ್ಭದಲ್ಲಿ ನಾವು ನೀವೆಲ್ಲ ಪಾಲಿಸಬೇಕಾದ ಏಳು ಸೂತ್ರಗಳು ಇಲ್ಲಿವೆ ಓದಿ.

  1. ಕೆಲವು ವಿಚಾರಗಳು ವೈಯಕ್ತಿಕವೆಂದು ಕಂಡರೂ ಅದು ವಾಸ್ತವದಲ್ಲಿ ಹಾಗಿಲ್ಲ. ನಿಮ್ಮಿಂದಾಗಿ ಜನರು ಏನಾದರೂ ಮಾಡುವುದಿಲ್ಲ. ಅವರು ಅವರಿಗಾಗಿಯೇ ಮಾಡುತ್ತಾರೆ.
  2. ಜನರು ನಿಮ್ಮ ¨ಗ್ಗೆ ಏನಾದರೂ ಹೇಳುವುದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಅವರು ಹೇಳಿದ್ದರಿಂದ ಧೃತಿಗೆಡದಂತೆ ನೀವಿರಬಹುದು. ಆಗ ನಿಮಗೆ ಹೆಚ್ಚಿನ ಸ್ವಾತಂತ್ರ್ಯದ ಅನುಭವವಾಗುತ್ತದೆ.
  3. ಜನರು ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ನಿಮ್ಮ ಮೇಲೆಯೇ ಅವಲಂಬಿಸಿದೆ.
  4. ರಚನಾತ್ಮಕ ಟೀಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ, ಆದರೆ ವೈಯಕ್ತಿಕವಾಗಿಯಲ್ಲ. ಅವರು ಹೇಳುವುದನ್ನು ಕೇಳಿ ಮತ್ತು ನಿಮ್ಮ ಆತ್ಮಸಾಕ್ಷಿ ಹೇಳಿದಂತೆ ನಡೆದುಕೊಳ್ಳಿ.
  1. ನೀವು ಒಳ್ಳೆಯವರು, ಚಾಣಾಕ್ಷರು, ಉತ್ತಮರು ಹಾಗೂ ಶಕ್ತಿವಂತರು. ಇತರರು ನಿಮ್ಮ ಮೌಲ್ಯವನ್ನು ಅಳೆಯಬೇಕೆಂದೇನಿಲ್ಲ. ನೀವು ಈಗಾಗಲೇ ಮೌಲ್ಯವಂತರು.
  2. ನೀವು ನಿಜವಾಗಿಯೂ ಆತ್ಮಸ್ಥೈರ್ಯದ ಪ್ರತೀಕದಂತಿರಬೇಕಾದರೆ ಇತರ ಜನರಿಗೆ ನಿಮ್ಮ ಭಾವನೆಗಳ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬೇಡಿ.
  3. ನೀವು ಭೇಟಿ ಮಾಡಿದ ಅತ್ಯಂತ ಕಠಿಣ ಮನೋಸ್ಥಿತಿಯ ಜನರೂ ಒಮ್ಮೆ ಮಗುವಿನಂತೆ ಮೃದುವಾಗಿದ್ದವರು. ಜನರು ಒರಟಾಗಿ ವರ್ತಿಸಿದಾಗ ನೀವು ತಾಳ್ಮೆಯಿಂದಿರಿ, ಅವರ ಬಗ್ಗೆ ಅನುಕಂಪ ತೋರಿಸಿ. ನಿಮ್ಮ ಕೆಟ್ಟ ದಿನಗಳು ಬಂದರೂ ನೀವು ಅದಕ್ಕಾಗಿ ಪರಿತಪಿಸುವುದಿಲ್ಲ ಎಂದು ಅವರಿಗೆ ಸ್ಪಷ್ಟಪಡಿಸಿ.