ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಇಲಾಖೆ ಸಮ್ಮತಿಸದೆ ಕಾಮಗಾರಿ ಹೇಗೆ

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುಮೋದನೆ ಇಲ್ಲದೇ ಪುತ್ತೂರು ಮಹಾಲಿಂಗೇಶ್ವರ ದೇವಳದ ರಾಜಗೋಪುರ ನಿರ್ಮಾಣ ಆಗುತ್ತಿದೆಯೆನ್ನಲಾಗಿದೆ. ಇತರ ಕಾಮಗಾರಿಗಳೂ ಇಲಾಖೆಯು ಸಮ್ಮತಿಸಿಲ್ಲವೆಂದು ಹೇಳಲಾಗುತ್ತಿದೆ. ಈ ಹಿಂದೆ ಭಾಜಪ ಬೆಂಬಲಿಗರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು, ಈಗ ಕಾಂಗ್ರೆಸ್ ಬೆಂಬಲಿಗರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸ್ವೇಚ್ಛಾಚಾರವಾಗಿ ದೇವಸ್ಥಾನದಲ್ಲಿ ಕಾಮಗಾರಿ ನಡೆಸುತ್ತಿರುವುದರ ವಿರುದ್ಧ ಧಾರ್ಮಿಕ ದತ್ತಿ ಆಯುಕ್ತರಿಗೆ, ಸಚಿವರಿಗೆ, ರಾಜ್ಯಪಾಲರಿಗೆ, ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತರಿಗೆ ಸವಿವರ ದೂರು ಸಲ್ಲಿಸಲಾಗಿದೆಯೆನ್ನಲಾಗಿದೆ.
ದೇವಸ್ಥಾನದ 14 ಎಕರೆ ಪ್ರದೇಶದಲ್ಲಿ ಆಮೂಲಾಗ್ರವಾಗಿ ನೀಲಿನಕಾಶೆ ಮಾಡಿ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ದಿ ಆಗಬೇಕಾಗಿದೆ.
ಈಗಾಗಲೇ ಬೀಗ ಹಾಕಲ್ಪಟ್ಟ ಸಭಾಗೃಹದ ಉದ್ಘಾಟನೆ ಮಾಡಿಲ್ಲ. ಉಪಯೋಗಕ್ಕೆ ಬಾರದೆ ಧೂಳು ತಿನ್ನುತ್ತಿದೆ. ಸಾರ್ವಜನಿಕ ಹಣವನ್ನು ವ್ಯಯಿಸಿ ನಿರ್ಮಿಸಿದ ಸಭಾಗೃಹ ಮಹಡಿಯು ನಾಲ್ಕು ವರ್ಷಗಳಿಂದಲೂ ಮುಚ್ಚಿದೆ. ಧಾರ್ಮಿಕ ದತ್ತಿ ಇಲಾಖೆಯ ಲೆಕ್ಕಪರಿಶೋಧಕರು, ಆಯುಕ್ತರು ಯಾಕೆ ಸುಮ್ಮನಿದ್ದಾರೆ
ಅನ್ನಪ್ರಸಾದ ವಿತರಿಸುವ ಅನ್ನಛತ್ರದ ವ್ಯವಸ್ಥೆಗೆ ಹೊಸ ಕಟ್ಟಡವನ್ನು ಯಾಕೆ ಬಳಸುತ್ತಿಲ್ಲ ಎಂದೂ ಪ್ರಶ್ನಿಸುತ್ತಿದ್ದಾರೆ. ಇದು ಭಾರಿ ಆದಾಯವಿರುವ  ಎ ಗ್ರೇಡ್ ದೇವಸ್ಥಾನವಾಗಿದ್ದು ಅದೆಷ್ಟೋ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ನಿಯಮಾವಳಿಯಂತೆ ಆಗದಿರುವುದಕ್ಕೆ ಭಕ್ತಸಮೂಹ ಅಚ್ಚರಿ ವ್ಯಕ್ತಪಡಿಸುತ್ತಿದೆ
ಯಾವುದೇ ಕಾಮಗಾರಿ ಅಥವಾ ವಸ್ತು ಖರೀದಿ ನಡೆಯಬೇಕಿದ್ದರೂ ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕದತ್ತಿ ಕಾನೂನು ನಿಯಮಾವಳಿಯಂತೆ ವ್ಯವಹರಿಸಬೇಕಾಗುತ್ತದೆಯಲ್ಲವೇ  ಸಾರ್ವಜನಿಕರು ಅರ್ಧಂಬದ್ಧ ಕಾಮಗಾರಿ  ಸ್ವೇಚ್ಛಾಚಾರ ಮನೋಭಾವವನ್ನು ಪ್ರಶ್ನಿಸುತ್ತಿದ್ದರೂ ವ್ಯವಸ್ಥಾಪನಾ ಸದಸ್ಯರು ಭಕ್ತರ  ತಜ್ಞರ ಅಭಿಪ್ರಾಯಗಳನ್ನು ಧಿಕ್ಕರಿಸುತ್ತಿದ್ದಾರೆ ಎಂಬುದಂತೂ ನಿಜ

  • ಆರ್ ಸುಭಾಶ್ಚಂದ್ರ  ಪುತ್ತೂರು