ಟೋಲ್ ವಿರೋಧಿ ಹೋರಾಟಕ್ಕೆ ಕಾರ್ಮಿಕರ ವೇದಿಕೆ ಬೆಂಬಲ

ನಮ್ಮ ಪ್ರತಿನಿಧಿ ವರದಿ

ಸಾಸ್ತಾನ :  ನವೆಂಬರ್ 30ರಂದು ಸಾಸ್ತಾನದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ಟೋಲ್ ಪಾಯಿಂಟಿನಲ್ಲಿ  ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡುವಂತೆ  ಒತ್ತಾಯಿಸಿ ನಡೆಸಲಿರುವ ಹೋರಾಟಕ್ಕೆ ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ  ಸಂಪೂರ್ಣ ಬೆಂಬಲ ನೀಡಲು ವೇದಿಕೆಯ ಪದಾಧಿಕಾರಿಗಳ  ಸಭೆಯಲ್ಲಿ ತೀರ್ಮಾನಿಸಲಾಗಿದೆ.   ಟೋಲಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಿ ಇಲ್ಲಿಯ ಕಾರ್ಮಿಕರನ್ನು ಕಡೆಗಣಿಸುವುದು ಮತ್ತು ಟೋಲಗಳಲ್ಲಿ ಸಾರ್ವಜನಿಕರ ಮೇಲೆ  ದಬ್ಬಾಳಿಕೆ ನಡೆಸುವುದನ್ನು ವಿರೋಧಿಸಿ ಹಾಗೂ ಇನ್ನೂ ಹಲವಾರು ಬೇಡಿಕೆಗಳನ್ನು ಮುಂದಿರಿಸಿ  ನಡೆಯುವ  ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ  ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮನವಿ ಮಾಡಿದ್ದಾರೆ.