ಕೆಲಸದ ಒತ್ತಡದಿಂದ ಪೇದೆ ಗುಂಡು ಹಾರಿಸಿ ಆತ್ಮಹತ್ಯೆ

ಚೆನ್ನೈ : ಸೈಂಟ್ ಥಾಮಸ್ ಮೌಂಟ್ ಪೊಲೀಸ್ ಠಾಣೆಯೊಳಗೆ ಸಶಸ್ತ್ರ ಮೀಸಲು ಪಡೆಯ 22 ವರ್ಷದ ಪೇದೆಯೊಬ್ಬ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ.

ಕೆಲಸದ ಒತ್ತಡದಿಂದ ನೊಂದುಕೊಂಡು ಗೋಪಿನಾಥ್ ಈ ಕೃತ್ಯ ನಡೆಸಿದ್ದಾನೆ ಎಂಬುದು ಆತ್ಮಹತ್ಯೆಗೆ ಮುನ್ನ ಬರೆದಿರುವ ಪತ್ರದಿಂದ ಗೊತ್ತಾಗಿದೆ. ಈತ ಸರ್ವಿಸ್ ರಿವಾಲ್ವರಿನಿಂದ ತಲೆಗೆ ಶೂಟ್ ಮಾಡಿ ಆತ್ಮಹತ್ಯೆಗೈದಿದ್ದಾನೆಂದು ಪೊಲೀಸರು ಹೇಳಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಧುರೈ ಜಿಲ್ಲೆಯ ನಿವಾಸಿಯಾಗಿದ್ದ ಗೋಪಿನಾಥ್ ತಿರುನೇಲ್ವಿಯ ಎಂಎಸ್ ಯೂನಿವರ್ಸಿಟಿಯಿಂದ ಬಿಎ ಪದವಿ ಗಳಿಸಿದ್ದರು.