ಮಹಿಳೆಯರ ದಿರಿಸುಗಳೇ ಬಲತ್ಕಾರಕ್ಕೆ ಪ್ರೇರಣೆಯೇ

ಹೆಣ್ಣು ಮಕ್ಕಳಿಗೆ ಉಡುಗೆಗಳೇ ಭೂಷಣ. ಅವುಗಳನ್ನು ಕೆಲವು ಹಿತಮಿತಿಯಲ್ಲಿ ಧರಿಸಿ ಓಡಾಡಿದರೆ ಅವರಿಗೆ ಭೂಷಣ ತಂದು ಕೊಡುವುದಲ್ಲದೆ, ಪುಂಡಪೋಕರಿಗಳು ಸಹ ಇಂತಹವರನ್ನು ಮುಟ್ಟಲು ಹಿಂಜರಿಯುತ್ತಾರೆ. ಕಾರಣ ಇಂತಹ ಮಕ್ಕಳನ್ನು ಮುಟ್ಟುವುದಾದರೂ ಹೇಗೆ ಎಂಬ ಭಯ ಅವರುಗಳಲ್ಲಿ ಆವರಿಸಿರುತ್ತದೆ. ಇತ್ತೀಚೆಗೆ ಕೆಲವು ವರ್ಗದ ಹೆಣ್ಣು ಮಕ್ಕಳ ಉಡುಪು ನೋಡಿದರೆ ಸಭ್ಯರು ನಾಚಿ ತಲೆತಗ್ಗಿಸಿಕೊಂಡು ನೋಡಿಯೂ ನೋಡದಂತೆ ಹೋಗುತ್ತಾರೆ. ಇದು ನೋಡುಗರ ಕಣ್ಣು ಕುಕ್ಕುವುದಲ್ಲದೆ ಚುಡಾಯಿಸುವುದು, ಬಲತ್ಕಾರಕ್ಕೆ ಮುಂದಾಗುವುದಕ್ಕೆ ಪ್ರೇರಪಣೆಯಾಗುತ್ತದೆ. ಈ ಹಿಂದೆ ಹೆಣ್ಣು ಮಕ್ಕಳು ಹರಿದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುತ್ತಿದ್ದುದನ್ನು ನೋಡಿದ ಅನೇಕರು ಇವರು ಬಡವರು, ಅವರನ್ನು ನೋಯಿಸುವುದು ಬೇಡ ಎಂಬ ಭಯ ಯುವಕರಲ್ಲಿ ಮೂಡುತ್ತಿತ್ತು. ಆದರೆ ಈಗಿನ ಯುವಕರಿಗೆ ಭಯವೇ ಇಲ್ಲದಂತಾಗಿದೆ. ಕಾರಣ ತಂದೆ-ತಾಯಿಗಳು ಶ್ರಮಪಟ್ಟು ಇವರನ್ನು ಸಾಕುತ್ತಾರೆ. ಇವರೇನು ನಯಾಪೈಸೆಯೂ ದುಡಿಯದೆ ತಂದೆ-ತಾಯಿಯರ ದುಡಿಮೆಯಲ್ಲಿಯೇ ಮಜಾ ಉಡಾಯಿಸಿರುತ್ತಾರೆ

  • ಕೆ ಅವಿನಾಶ್ ಕೋಟ್ಯಾನ್, ಕುದ್ರೋಳಿ