ಡೀಸಿ, ಎಸಿ ಕೊಲೆಯತ್ನ : ಉಡುಪಿಯಲ್ಲಿ ಮಹಿಳಾ ಸಂಘಟನೆಗಳ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಹಿತ ಅಧಿಕಾರಿಗಳ ಮೇಲೆ ನಡೆದ ಕೊಲೆ ಯತ್ನ ಪ್ರಕರಣವನ್ನು ಖಂಡಿಸಿ ಉಡುಪಿಯಲ್ಲಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.

ಉಡುಪಿ ಕ್ಲಾಕ್ ಟವರ್ ಬಳಿ ಸೇರಿದ ವಿವಿಧ ಮಹಿಳಾ ಸಂಘಟನೆಯ ನೂರಾರು ಕಾರ್ಯಕರ್ತೆಯರು, ಕೊಲೆಯತ್ನಕ್ಕೆ ಮುಂದಾದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು, ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಹಿಳಾ ಮಂಡಳಿ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ ಮಾತನಾಡಿ, “ಡೀಸಿ ಮತ್ತು ಎಸಿ ಮೇಲೆ ನಡೆದ ಕೊಲೆ ಯತ್ನ ನಮ್ಮೆಲ್ಲರ ಮೇಲೆ ನಡೆದ ಹಲ್ಲೆಯಾದಂತೆ. ಕೂಡಲೇ ನಿಜವಾದ ಆರೋಪಿಗಳನ್ನು ಪೆÇಲೀಸ್ ಇಲಾಖೆ ಬಂಧಿಸಬೇಕು. ಮುಂದಿನ ದಿನಗಳಲ್ಲಿ ಮರಳುಗಾರಿಕೆ  ವ್ಯವಸ್ಥಿತವಾಗಿ ನಡೆಯುವ ರೀತಿ ಸರ್ಕಾರ ನಿಯಮ ರೂಪಿಸಬೇಕು;; ಎಂದು ಆಗ್ರಹಿಸಿದರು.