ವಿವಾಹ ಬಳಿಕ ಮಹಿಳೆ ಪಾಸ್ಪೋರ್ಟಿನಲ್ಲಿ ಹೆಸರು ಬದಲಿಸಬೇಕಾಗಿಲ್ಲ : ಪ್ರಧಾನಿ

ನವದೆಹಲಿ : ವಿವಾಹದ ನಂತರ ಮಹಿಳೆಯರು ತಮ್ಮ ಪಾಸ್ಪೋರ್ಟಿನಲ್ಲಿ ವಿವಾಹಪೂರ್ವ ಮೂಲದ ಹೆಸರು ಬದಲಿಸಿಕೊಳ್ಳಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಸ್ಪೋರ್ಟಿನಲ್ಲಿ ತಮ್ಮ ತಂದೆ ಅಥವಾ ತಾಯಿಯ ಹೆಸರನ್ನು ನಮೂದಿಸುವ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮಹಿಳೆಗೆ ಸೇರಿದೆ ಎಂದು ಇಂಡಿಯನ್ ಮರ್ಚೆಂಟಿನ ಮಹಿಳಾ ಘಟಕದ 50ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸ್ಪಷ್ಟಪಡಿಸಿದರು.