ಮಹಿಳೆ ನಾಪತ್ತೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪತ್ನಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ವಳಮಲೆಯ ಬಾಡಿಗೆ ಕ್ವಾರ್ಟರ್ಸಿನಲ್ಲಿ ವಾಸಿಸುವ ಪ್ರಕಾಶ ಎಂಬುವವರು ಬದಿಯಡ್ಕ ಪೆÇಲೀಸರಿಗೆ ದೂರು ನೀಡಿದ್ದಾರೆ.

ಪತ್ನಿ ರಶ್ಮಿ ಶನಿವಾರ ಮಧ್ಯಾಹ್ನದವರೆಗೆ ಮನೆಯಲ್ಲಿದ್ದಳು. ಅನಂತರ 7 ಹಾಗೂ 5 ವರ್ಷದ ಇಬ್ಬರು ಮಕ್ಕಳನ್ನು ಉಪೇಕ್ಷಿಸಿ ಆಕೆ ನಾಪತ್ತೆಯಾಗಿದ್ದಾಳೆಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆಗೆ ಪಯ್ಯೂನ್ನೂರು ನಿವಾಸಿಯಾದ ಆಟೋ ಚಾಲಕನೊಂದಿಗೆ ಸ್ನೇಹವಿತ್ತೆಂದು ಹೇಳಲಾಗುತ್ತಿದೆ. ಪ್ರಕಾಶ ಕೂಲಿ ಕಾರ್ಮಿಕನಾಗಿದ್ದಾನೆ.