ಈ ಮಹಿಳೆಯರಿಗೆ ತಮ್ಮ ಪಟ್ಟಣದಲ್ಲಿ ಎಂಎಸೈಎಲ್ ಮದ್ಯದಂಗಡಿ ಬೇಕಂತೆ

ಸಾಂದರ್ಭಿಕ ಚಿತ್ರ

ಬೆಳಗಾವಿ : ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರು ತಮ್ಮ ಪಟ್ಟಣದಲ್ಲಿ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿದರೆ ಕಾಗ್ವಾಡ್ ಪಟ್ಟಣದ ಮಹಿಳೆಯರಿಗೆ ತಮ್ಮ ಪಟ್ಟಣದಲ್ಲಿ ಮದ್ಯದಂಗಡಿ ತೆರೆಯಬೇಕಂತೆ. ಅದಕ್ಕಾಗಿ ಸೋಮವಾರ ಪಟ್ಟಣದ ಮಹಿಳೆಯರ ಗುಂಪೊಂದು ಜಿಲ್ಲಾಧಿಕಾರಿ ಕಚೇರಿ ಎದುರು ಎಂಎಸೈಎಲ್ ಮದ್ಯದ ಅಂಗಡಿ ತೆರೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಾಗ್ವಾಡ್ ಪಟ್ಟಣದಲ್ಲಿ ಹಲವು ಖಾಸಗಿ ಮದ್ಯದಂಗಡಿಗಳಿವೆ. ಆದರೆ ಅವರು ಎಂಆರ್ಪಿ ದರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.ಈ ಮದ್ಯದಿಂದ ವ್ಯಭಿಚಾರಗಳು ನಡೆಯುತ್ತಿವೆ. ಇದರಿಂದ ಗಂಡಂದಿರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಮಹಿಳೆಯರು ಹೇಳಿದ್ದಾರೆ.

ಮಹಿಳೆಯರ ಗುಂಪು ಜಿಲ್ಲಾಧಿಕಾರಿಗೆ ಸಲ್ಲಿಸಿದ ವಿಜ್ಞಾಪನಾ ಪತ್ರದಲ್ಲಿ ಕಾಗ್ವಾಡ್ ಪಟ್ಟಣದಲ್ಲಿ ಹೊಸ ಎಂಎಸೈಎಲ್ ಅಂಗಡಿಯನ್ನು ತೆರೆಯಲು ಜಿಲ್ಲಾ ಪ್ರಾಧಿಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಎಂಎಸೈಎಲ್ ತೆರೆಯದೇ ಇದ್ದರೆ ಪ್ರಸ್ತುತ ಅಸ್ಥಿತ್ವದಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಮತ್ತು ಕಾಗ್ವಾಡ್ ಪಟ್ಟಣವನ್ನು ಮದ್ಯ ನಿಷೇಧಿತ ಪಟ್ಟಣವೆಂದು ಘೋಷಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.

LEAVE A REPLY