ಮಹಿಳೆಯ ಸರ ಕಸಿದು ಪರಾರಿ

ಸಾಂದರ್ಭಿಕ ಚಿತ್ರ

ಮಂಗಳೂರು : ಪೆರ್ಮುದೆ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಸರವನ್ನು ಕಸಿದು ಬೈಕ್ ಸವಾರರಿಬ್ಬರು ಪರಾರಿಯಾಗಿದ್ದಾರೆ.

ಪೆರ್ಮುದೆ ಕೋಡಿಯಾಣ ಹೌಸ್ ನಿವಾಸಿ ಐರಿನ್ ಡಿಕುನ್ಹಾ ಅವರು ಕೆಲಸದ ನಿಮಿತ್ತ ಹೊರ ತೆರಳಿದ್ದು, ಹಿಂತಿರುಗಿ ಬರುವಾಗ ಪೆರ್ಮುದೆ ಪಂಚಾಯತ್ ಬಳಿ ಇವರ ಬಳಿಗೆ ಆಗಮಿಸಿದ ಇಬ್ಬರು ಬೈಕ್ ಸವಾರರು ಸೂರಿಂಜೆಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಐರಿನ್ ಅವರಿಗೆ ದಾರಿ ತೋರಿಸಿದ್ದು, ಸ್ವಲ್ಪ ಮುಂದಕ್ಕೆ ಹೋದ ಅಪರಿಚಿತರು ಮತ್ತೆ ಮರಳಿ ಬಂದಿದ್ದು, ಏಕಾಏಕಿ ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ವಾಹನದಲ್ಲಿದ್ದ ಓರ್ವ ಹೆಲ್ಮೆಟ್ ಧರಿಸಿದ್ದ. ಇನ್ನೊಬ್ಬ ಮುಖ ಮುಚ್ಚಿಕೊಂಡಿರುವ ಟೋಪಿಯನ್ನು ಹಾಕಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 4 ಪವನ್ ಚಿನ್ನದ ಸರದ ಅಂದಾಜು ಮೌಲ್ಯ 75,000 ರೂ ಎಂದು ಅಂದಾಜಿಸಲಾಗಿದೆ.

ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.