ಬ್ಯಾಂಕಿನೆದರು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಸರ್ಕಾರ 2 ಲಕ್ಷ ರೂ ಪರಿಹಾರ

ಲಕ್ನೋ : ಎಲ್ಲರಂತೆ ಇಲ್ಲಿನ ಬ್ಯಾಂಕೊಂದರ ಎದುರು ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ತುಂಬು ಗರ್ಭಿಣಿಯೊಬ್ಬಳು ಸರತಿ ಸಾಲಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿಗೆ ಉತ್ತರ ಪ್ರದೇಶ ಸೀಎಂ ಅಖಿಲೇಶ್ ಯಾದವ್ ಎರಡು ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ.

ಈ ಘಟನೆ ಕಳೆದ ವಾರ ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಜಿಂಜಹಕ್ ಪಟ್ಟಣದಲ್ಲಿ ನಡೆದಿದೆ. ಸರ್ವೇಶ್ ದೇವಿ ಎಲ್ಲರಂತೆ ಬ್ಯಾಂಕಿನೆದುರು ಹಣ ಪಡೆಯಲು ಸಾಲಿನಲ್ಲಿ ನಿಂತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತಲೇ ಸೀಎಂ ಯಾದವ್, ಈ ಮಹಾತಾಯಿಗೆ ಗೌರವಪೂರ್ವಕ ನಗದನ್ನು ಚೆಕ್ ರೂಪದಲ್ಲಿ ಹಸ್ತಾಂತರಿಸಿದ್ದಾರೆ.