ಆಶ್ಲೀಲ ವರ್ತಿಸಿದವಗೆ ಮಹಿಳೆಯಿಂದ ಗೂಸಾ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಮಾರುಕಟ್ಟೆ ಬಳಿ ಅನ್ಯಕೋಮಿನ ವ್ಯಕ್ತಿಯೊಬ್ಬ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿ ಮಹಿಳೆ ಸಹಿತ ಸ್ಥಳೀಯರು ವ್ಯಕ್ತಿಗೆ ಗೂಸಾ ಇಕ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೃಷ್ಣಾಪುರ ನಿವಾಸಿ ಅನ್ಯಕೋಮಿನ ವ್ಯಕ್ತಿ ಸುರತ್ಕಲ್ ಮಾರುಕಟ್ಟೆ ಬಳಿ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದ ಎನ್ನಲಾಗಿದೆ. ಕೂಡಲೇ ಮಹಿಳೆ ಹಾಗೂ ಸ್ಥಳೀಯರು ಆತಗೆ ಗೂಸಾ ಇಕ್ಕಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದ ಸುರತ್ಕಲ್ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪು ಸೇರಿದವರನ್ನು ಚದುರಿಸಿ ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.