ಸುಟ್ಟು ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಶಿರಸಿ : ಹೋದ ತಿಂಗಳು ಬಚ್ಚಲು ಮನೆಗೆ ನೀರು ಕಾಯಿಸಲು ಬೆಂಕಿ ಹಿಡಿಸುವಾಗ ಸುಟ್ಟು ಗಾಯಗೊಂಡಿದ್ದ ಮಹಿಳೆಯು 35 ದಿನಗಳ ಸತತ ಚಿಕಿತ್ಸೆ ಬಳಿಕವೂ ಚೇತರಿಸಿಕೊಳ್ಳದೇ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹನುಮಂತಿಯ ಬೆಳ್ಳಿ ಗೌಡ ಅವರು ಜುಲೈ 10ರಂದು ಬಚ್ಚಲುಮನೆಯಲ್ಲಿ ನೀರು ಕಾಯಿಸಲು ಬೆಂಕಿ ಹಚ್ಚಿದಾಗ, ಅದು ಮಹಿಳೆ ಮೈಗೆ ತಾಗಿ ಸುಟ್ಟುಕೊಂಡಿದ್ದಳು. ತಕ್ಷಣ ಅವರನ್ನು ಶಿರಸಿ ಖಾಸಗಿ ಆಸ್ಪತ್ರೆ ಬಳಿಕ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೂ ಸೇರಿಸಲಾಯಿತು. ಅಲ್ಲಿಯೂ ಆಗದೇ ವಾಪಸ್ ಶಿರಸಿ ಆಸ್ಪತ್ರೆಗೆ ತರಲಾಯಿತು. ಮಂಗಳವಾರ ಮಹಿಳೆ ಚೇತರಿಸಿಕೊಳ್ಳದೇ ಮೃತಪಟ್ಟಿದ್ದಾಳೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.