ಕಾರಿನಲ್ಲಿ ಯುವತಿಗೆ ಗುಂಡು ಹಾರಿಸಿ ಸಾಯಿಸಿದ ಗೆಳೆಯ

ನವದೆಹಲಿ : ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳನ್ನು ಆಕೆಯ ಗೆಳೆಯ ಕಾರಿನೊಳಗೆ ಗುಂಡಿಟ್ಟು ಸಾಯಿಸಿದ ಘಟನೆ ಪಶ್ಚಿಮ ದಿಲ್ಲಿಯ ನಜಫ್ಗರಿನಲ್ಲಿ ಮೊನ್ನೆ ನಡೆದಿದೆ.

ಯುವತಿಯ ತಂದೆ ರಾಜಸ್ತಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೊಲೆಗೈದ ಶಂಕಿತ ಪ್ರಮುಖ ಆರೋಪಿ ಶುಭಂ ಎಂಬಾತನನ್ನು ಬಂಧಿಸಲಾಗಿದೆ. ಮಾಯಾ (ಹೆಸರು ಬದಲಿಸಲಾಗಿದೆ) ಎಂಬಾಕೆ ಆಕೆಯ ಗೆಳೆಯ ಶುಭಂನಿಂದ ಗುಂಡೇಟಿಗೆ ಮೃತಪಟ್ಟಿದ್ದಾಳೆ. ಈಕೆಯ ಮೃತದೇಹವಿದ್ದ ಮರ್ಸಿಡಿಸ್ ಕಾರು ದೀಪಕ್ ವಿಹಾರದಲ್ಲಿ ಅನಾಥವಾಗಿತ್ತು ಎಂದು ಪೊಲೀಸರು ತಿಳಿಸಿದರು.