ಮಹಿಳೆಯ ಸರಗಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಸ್ತೆ ಬದಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಬೈಕ್ ಸವಾರರು ಕಿತ್ತು ಪರಾರಿಯಾದ ಘಟನೆ ನಗರದ ಹೊರವಲಯದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಡೆದಿದೆ.

ಪಣಿಯಾಡಿ ಬುಡ್ನಾರು ರಸ್ತೆಯ ಶ್ರೀರಾಮ ನಿವಾಸ ಮನೆಯ ಯಶೋದಮ್ಮ ರಾವ್ (70) ಚಿನ್ನದ ಸರವನ್ನು ಕಳಕೊಂಡವರು. ಈಕೆ ಮಗಳು ಭಾಗ್ಯಲಕ್ಷ್ಮೀ ಮತ್ತು ಮೊಮ್ಮಗ ಭರತನೊಂದಿಗೆ ಶಾರಾದ ಕಲ್ಯಾಣ ಮಂಟಪ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಮಂಗೇಶ್ ಟವರ್ ಬಳಿ ಬೈಕೊಂದರಲ್ಲಿ ಬಂದ ಇಬ್ಬರ ಅಪರಿಚಿತರು ಯಶೋದಮ್ಮಳ ಕುತ್ತಿಗೆಯಲ್ಲಿದ್ದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಚಿನ್ನದ ಸರ ಎಳೆದು ಪರಾರಿಯಾಗಿರುವ ವ್ಯಕ್ತಿಗಳು ಎದುರಿನಲ್ಲಿದ್ದವನು ಹೆಲ್ಮೆಟ್ ಧರಿಸಿದ್ದು ನೀಲಿ ಬಣ್ಣದ ಜೀನ್ಸ್‍ಪ್ಯಾಂಟ್ ಮತ್ತು ದೊಡ್ಡ ಕಪ್ಪು ಚೆಕ್ಸ್ ಇರುವ ತುಂಬು ತೋಳಿನ ಶರ್ಟ್ ಹಾಗೂ ಹಿಂದೆ ಕುಳಿತಿದ್ದವನು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಹ್ಯಾಶ್ ಕಲರಿನ ತುಂಬು ತೋಳಿನ ಶರ್ಟ್ ಧರಿಸಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.