ಸೇತುವೆಯಿಂದ ನದಿಗೆ ಹಾರಿದ ಮಹಿಳೆ ಕಣ್ಮರೆ

ಸೇತುವೆಯಲ್ಲಿ ಪರಿಶೀಲಿಸುತ್ತಿರುವ ಪೊಲೀಸ್ ಮತ್ತಿತರರು

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ನೇತ್ರಾವತಿ ನದಿ ಸೇತುವೆ ಮೇಲ್ಭಾಗದಿಂದ ನದಿಗೆ ಹಾರಿ ಮಹಿಳೆಯೊಬ್ಬರು ಕಣ್ಮರೆಯಾದ ಘಟನೆ ನಡೆದಿದೆ.
ನದಿಗೆ ಹಾರಿ ಕಣ್ಮರೆಯಾದಾಕೆಯನ್ನು ಕಂಕನಾಡಿ ವಿಜಯ ಎಂಬವರ ಪತ್ನಿ ತುಳಸಿ (49) ಎಂದು ಗುರುತಿಸಲಾಗಿದೆ. ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ತನ್ನ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಗಳನ್ನು ತೆಗೆದಿಟ್ಟು ಈಕೆ ಮೇಲ್ಭಾಗದಿಂದ ಕೆಳಕ್ಕೆ ಹಾರಿದ್ದಾರೆ.
ಈ ಮಾರ್ಗವಾಗಿ ಸಾಗುತ್ತಿದ್ದ ಪ್ರಯಾಣಿಕರು ಇದನ್ನು ಕಂಡು ಕೂಡಲೇ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಈಕೆಗೆ ಹುಡುಕಾಟ ನಡೆಯುತ್ತಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.