ಎರಡು ತಿಂಗಳು ಕಳೆದರೂ ನಾಪತ್ತೆ ಮಹಿಳೆ ಸುಳಿವಿಲ್ಲ

ಕಾರ್ಕಳ : ಕಳೆದ ಸೆಪ್ಟೆಂಬರ್ 28ರಂದು ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ವ್ಯಾಪ್ತಿಯ ಬೋಳಾಪುರ ನಿವಾಸಿ ವಿಠಲ ನಾಯ್ಕರ ಪತ್ನಿ ಮೂಲತಃ ಅಜೆಕಾರಿನವರಾದ ವಿಜಯಾ ಕಾಣೆಯಾಗಿ 2 ತಿಂಗಳು ಕಳೆದರೂ ಆಕೆಯನ್ನು ಪತ್ತೆಹಚ್ಚುವಲ್ಲಿ ಹರಿಹರ ಪೊಲೀಸರು ವಿಫಲರಾಗಿದ್ದಾರೆ.

ವಿಜಯಾ ಸೆ 28ರಂದು ದೀಪಾವಳಿ ಹಬ್ಬಕ್ಕೆ ದಿನಸಿ ಸಾಮಾನು ತರಲೆಂದು ಸಮೀಪದ ಗಡಿಕಲ್ ಪೇಟೆಗೆ ಹೋದವರು ಮರಳಿ ಬಂಧಿಲ್ಲ. ಎಲ್ಲೆಡೆ ಹುಡುಕಾಡಿ ಏನೂ ಪ್ರಯೋಜನವಾಗದ ನಂತರ ಪತಿ ತನ್ನ ಪತ್ನಿ ಕಾಣೆಯಾದ ಬಗ್ಗೆ ಅ 5ರಂದು ಹರಿಹರ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ನಾಪತ್ತೆ ಪ್ರಕರಣ ದಾಖಲಾಗಿ 2 ತಿಂಗಳು ಕಳೆದರೂ ಪತ್ನಿ ಪತ್ತೆಯಾಗದ ಬಗ್ಗೆ ಪತಿ ಚಿಂತಾಕ್ರಾಂತರಾಗಿದ್ದಾರೆ.