ರೈಲು ಡಿಕ್ಕಿಯಾಗಿ ಮೃತಪಟ್ಟ ಯುವತಿಯ ಗುರುತು ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಇಲ್ಲಿನ ರೈಲು ನಿಲ್ದಾಣ ಪರಿಸರದಲ್ಲಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಗುರುತು ಪತ್ತೆ ಹಚ್ಚಲಾಗಿದೆ. ಮೃತಳು ಪೈವಳಿಕೆ ಅಂಬಿಕಾನ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಮಿತ್ರ ಎಂಬುದಾಗಿ ಸಂಬಂಧಿಕರು ದೃಢೀಕರಿಸಿದ್ದಾರೆ.

ಕಳೆದ ಬುಧವಾರ ಈಕೆ ಕಾಸರಗೋಡು ಚೌಕಿಯಲ್ಲಿರುವ ಸಹೋದರಿ ಪುಷ್ಪಾರ ಮನೆಗೆ ತೆರಳುವುದಾಗಿ ಮನೆಯಿಂದ ತೆರಳಿದ್ದರು. ಆ ಬಳಿಕ ಯಾವುದೇ ಸುಳಿವು ಲಭಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಪೆÇಲೀಸರಿಗೆ ದೂರು ನೀಡಲು ಸಿದ್ಧತೆಯಲ್ಲಿರುವಂತೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ನೋಡಿ ಮಂಗಲ್ಪಾಡಿ ಶವಾಗಾರಕ್ಕೆ ತೆರಳಿ ಗುರುತು ಪತ್ತೆ ಹಚ್ಚಿದ್ದಾರೆ.