ಅಳಿಯನಿಂದ ಅತ್ತೆ ಕೊಲೆ

ಸಾಂದರ್ಭಿಕ ಚಿತ್ರ

ಹಳಿಯಾಳ : ಪಟ್ಟಣದ ಆಶ್ರಯನಗರ ದೇಶಪಾಂಡೆ ಬಡಾವಣೆಯಲ್ಲಿ ರವಿವಾರ ಮಧ್ಯರಾತ್ರಿ ಅಳಿಯನೊಬ್ಬನು ಅತ್ತೆಯ ಕೊಲೆ ಮಾಡಿದ್ದಾನೆ.

ಕೃತ್ಯ ಎಸಗಿದ ನರೇಂದ್ರ ವಚನ ಚಾವಲಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅತ್ತೆ ಶಂಕುತಲಾ ಜಯಪಾಲ ಕುಲಕರ್ಣಿ ಕೊಲೆಗೀಡಾದವಳು.

ಗೋವಾ ರಾಜ್ಯದ ನರೇಂದ್ರ ಚಾವಲಾ ಕಳೆದ 6 ತಿಂಗಳಿನಿಂದ ಪಟ್ಟಣದ ದೇಶಪಾಂಡೆ ನಗರದಲ್ಲಿರುವ ತನ್ನ ಅತ್ತೆ ಶಂಕುತಲಾ ಮನೆಯಲ್ಲಿ ವಾಸವಾಗಿದ್ದನು. ರವಿವಾರ ಮಧ್ಯರಾತ್ರಿ ತನ್ನ ಪತ್ನಿ ರೇಖಾ ಚಾವಲಾಳೊಂದಿಗೆ ಕ್ಷುಲ್ಲಕ ಕಾರಣ ಮುಂದೊಡ್ಡಿ ಜಗಳ ಮಾಡುವ ಸಮಯದಲ್ಲಿ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಅತ್ತೆಗೆ ಚಾಕುವಿನಿಂದ ಇರಿದ ಪರಿಣಾಮ ಅತ್ತೆ ಸಾವಿಗೀಡಾಗಿದ್ದಾಳೆ. ಪತ್ನಿ ರೇಖಾ ಚಾವಲಾ ಪತಿಯ ವಿರುದ್ಧ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY