ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಸ್ಸಿನಿಂದ ಬಿದ್ದು ಮಹಿಳೆಯೊಬ್ಬಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಮುಳ್ಳೇರಿಯ ಬಳಿಯ ಕುಕ್ಕಂಗೈ ಪುದಿಯಕಂಡ ನಿವಾಸಿ ಅಬ್ದುಲ್ ಖಾದರ್ ಎಂಬವರ ಪತ್ನಿ ಬೀಫಾತ್ತಿಮ ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೀಫಾತ್ತಿಮ ಅವರು ಸಾರಿಗೆ ಬಸ್ಸಿನಲ್ಲಿ ಬೋವಿಕ್ಕಾನಕ್ಕೆ ತೆರಳಿದ್ದು, ಬೋವಿಕ್ಕಾನದಲ್ಲಿ ಅವರು ಬಸ್ಸಿನಿಂದ ಇಳಿಯುತ್ತಿದ್ದಂತೆ ಬಸ್ ಚಲಿಸಿದಾಗ ಆಯ ತಪ್ಪಿ ರಸ್ತೆಗೆ ಬಿದ್ದರು. ಇದರಿಂದ ಕಾಲಿಗೆ ಗಾಯವಾಗಿದೆ. ಘಟನೆ ಸಂಬಂಧ ಬಸ್ಸನ್ನು ಆದೂರು ಪೆÇಲೀಸರು ಕಸ್ಟಡಿಗೆ ತೆಗೆದುಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

LEAVE A REPLY