ಸರತಿಯಲ್ಲಿ ನಿಂತಿದ್ದ ಮಹಿಳೆ ಬ್ಯಾಂಕಿನೊಳಗಡೆ ಡೆಲಿವರಿ

 ಕಾನ್ಸುರ : ಹಣ ಪಡೆಯಲು ತನ್ನ ಅತ್ತೆಯೊಂದಿಗೆ ಸರತಿಯಲ್ಲಿ ನಿಂತಿದ್ದ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯ ಬ್ಯಾಂಕೊಂದರೊಳಗೆ ಮಹಿಳೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪೂರ್ವ ಘಟನೆ ಮೊನ್ನೆ ನಡೆದಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕಿನ ಜಿಂಜಾಕ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿದ್ದ ಕೆಲವು ಮಹಿಳೆಯರೇ ಗರ್ಭಿಣಿ ಮಹಿಳೆ ಸರ್ವೇಶಾಳಿಗೆ ಮಗು ಜನ್ಮ ಕೊಡಲು ನೆರವಾಗಿದ್ದರು. ಬಳಿಕ ತಾಯಿ ಮತ್ತು ಮಗುವನ್ನು ಪೊಲೀಸ್ ವ್ಯಾನಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ.

ಗುರುವಾರ ಹಣ ಪಡೆಯಲಾಗದ ಕಾರಣ ಈಕೆ ಮರುದಿನವೂ ಹಣ ಪಡೆಯಲು ಬ್ಯಾಂಕಿನೆದುರು ಸರತಿಯಲ್ಲಿ ನಿಂತಿದ್ದರು. ಬೆಳಿಗ್ಗಿನಿಂದ ಸಾಲಿನಲ್ಲಿದ್ದ ಈಕೆಗೆ ಸಂಜೆ 4 ಗಂಟೆ ಹೊತ್ತಿಗೆ ಪ್ರಸವ ಬೇನೆ ಕಾಣಿಕೊಂಡಿತ್ತು. “ಸರ್ವೇಶ್ ಕೃಶವಾಗಿದ್ದರೂ, ಆರೋಗ್ಯವಂತಳಾಗಿದ್ದಾಳೆ” ಎಂದು ಅತ್ತೆ ಶಶಿ ಹೇಳಿದರು.

ಸರ್ವೇಶಾಳ ಗಂಡ ಅಶ್ವೇಂದ್ರ ಸೆಪ್ಟೆಂಬರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈಕೆ ತನಗೆ ಸರ್ಕಾರದಿಂದ ಪ್ರಕಟಗೊಂಡಿದ್ದ ಪರಿಹಾರ ಮೊತ್ತದ ಪ್ರಥಮ ಕಂತಿನ 2.75 ಲಕ್ಷ ರೂ ಪಡೆಯಲು ಬ್ಯಾಂಕಿಗೆ ತೆರಳಿದಾಗ ಕೊನೆಯುಸಿರೆಳೆದಿದ್ದರು.