ಅಂತ್ಯಕ್ರಿಯೆಗೆ ಮುನ್ನ ಉಸಿರಾಡಿದ ಮಹಿಳೆ

ನವದೆಹಲಿ : ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆಂದು ವೈದ್ಯರು ಪ್ರಕಟಿಸಿದ ಬಳಿಕ, ಅಂತ್ಯಕ್ರಿಯೆಗಾಗಿ ಸಿದ್ಧತೆ ನಡೆಸುತ್ತಿದ್ದಾಗ ಆಕೆ ಏಕಾಏಕಿಯಾಗಿ ಉಸಿರಾಡುತ್ತಿದ್ದ ದೃಶ್ಯ ಕಂಡು ಪತಿ ಅಚ್ಚರಿಗೊಂಡಿರುವುದಲ್ಲದೆ, ಪೊಲೀಸ್ ದೂರು ನೀಡಿದ್ದಾರೆ.

ಗ್ರೇಟರ್ ನೋಯ್ಡಾದ ಶಾರದಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯನ್ನು ಉಪಚರಿಸಿದ ಇಬ್ಬರು ವೈದ್ಯರ ತಂಡ, “ಈಕೆ ಸುಟ್ಟ ಗಾಯಗಳಿಂದ ಆಘಾತಕ್ಕೊಳಗಾಗಿ ಜೀವಂತ ಸಾಯುವಂತಾಗಿದೆ” ಎಂದು ಸೋಮವಾರ ವರದಿ ನೀಡಿದ್ದರು.

“ಮಹಿಳೆಯು ಸುಟ್ಟುಕೊಂಡಿರುವುದರಿಂದ ಜೀವಂತ ಸಾವನ್ನಪ್ಪಿದ್ದಾಳೆ” ಎಂದು ಅಲಿಗಢ ಪೊಲೀಸ್ ಅಧೀಕ್ಷಕ ರಾಜೇಶ್ ಪಾಂಡೆ ಸುದ್ದಿಗಾರರಲ್ಲಿ ತಿಳಿಸಿದ್ದರು.