ಸೊಸೆಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಅತ್ತೆ, ಮಾವ

ಸಾಂದರ್ಭಿಕ ಚಿತ್ರ

ವರದಕ್ಷಿಣೆ ಹಿಂಸೆ

ಪಾಟ್ನಾ : ತಾವು ಬೇಡಿಕೆಯಿಟ್ಟಿದ್ದ ರೂ 27 ಲಕ್ಷ ವರದಕ್ಷಿಣೆ ತಾರದ ತಪ್ಪಿಗೆ ಯುವತಿಯೊಬ್ಬಳಿಗೆ ಆಕೆಯ ಗಂಡನ ಮನೆಯವರು ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಕುಡಿಸಿದ ಘಟನೆ ಮುಜಫ್ಫರಪುರ ಜಿಲ್ಲೆಯ ಶಂಕರಪುರಿಯಿಂದ ವರದಿಯಾಗಿದೆ. ರಶ್ಮಿ ಬಂಕ ಎಂಬ ಈ ಯುವತಿ ಆಸ್ಪತ್ರೆ ತಲುಪುವುದು ಅರ್ಧ ಗಂಟೆ ತಡವಾಗುತ್ತಿದ್ದರೂ ಆಕೆಯ ಪ್ರಾಣ ಹೋಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ರಶ್ಮಿಯು ತಾನು ಪ್ರೀತಿಸುತ್ತಿದ್ದ ಅಮಿತ್ ಬಂಕ ಎಂಬ ಯುವಕನನ್ನು ಆತನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅಂತರ್ಜಾತೀಯ ವಿವಾಹವಾಗಿದ್ದಳು. ವಿವಾಹವಾದ ನಂತರ ಪುಣೆಯಲ್ಲಿ ವಾಸವಾಗಿದ್ದ ದಂಪತಿಯನ್ನು ತಮ್ಮೊಂದಿಗೆ ಇರುವಂತೆ ಅಮಿತ್ ಹೆತ್ತವರು ಹೇಳಿದ ಕಾರಣ ಅವರು ಅಲ್ಲಿ ವಾಸಿಸಲಾರಂಭಿಸಿದ್ದರೂ ಕೆಲವೇ ಸಮಯದಲ್ಲಿ ರಶ್ಮಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರೆನ್ನಲಾಗಿದೆ.