ಗಂಡ, ಮೈದುನ ವಿರುದ್ಧ ಮಹಿಳೆ ಕಿರುಕಳ ಆರೋಪ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿದಿ ವರದಿ

ಉಡುಪಿ : ಮಣಿಪಾಲ ಸಮೀಪದ ಶಾಂತಿನಗರ ನಿವಾಸಿ, ಡ್ರೈವಿಂಗ್ ಶಾಲೆಯೊಂದರ ಮಾಲಕಿ ಫ್ಲೆಸಿಟಾ ಎ ಬಾರ್ನೆಸ್ ತನಗೆ ಗಂಡ ಹಾಗೂ ಮೈದುನ ಕಿರುಕಳ ನೀಡುತ್ತಿದ್ದಾರೆಂದು ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಫ್ಲೆಸಿಟಾ ಬಾರ್ನೆಸ್ ಮಣಿಪಾಲ ಸಮೀಪದ ಶಾಂತಿನಗರದಲ್ಲಿ ಡ್ರೈವಿಂಗ್ ಶಾಲೆಯನ್ನು ತೆರೆದುಕೊಂಡು ಜೀವನ ನಡೆಸುತ್ತಿದ್ದಾರೆ. ಈ  ಮಧ್ಯೆ ಆರೋಪಿಗಳಾದ ಗಂಡ ಮತ್ತು ಮೈದುನ ಸೇರಿಕೊಂಡು ಆಕೆಯ ಡ್ರೈವಿಂಗ್ ಶಾಲೆಗೆ ಬಂದು ಅಲ್ಲಿನ ಎಲ್ಲಾ ದಾಖಲೆಗಳನ್ನು ಹಾಗೂ ಪಾಸ್ಪೋರ್ಟ್ ಕಸಿದುಕೊಂಡು ಹೋಗಿದ್ದಲ್ಲದೇ, ವಾಹನವೊಂದನ್ನು ಸುಟ್ಟು ನಷ್ಟವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದಲ್ಲಿ ಕೊಲ್ಲದೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿ ಫ್ಲೆಸಿಟಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.