ಮಗಳು ನಾಪತ್ತೆಯಾಗಿದ್ದಾಳೆಂಬ ನಾಟಕ ಸೃಷ್ಟಿಸಿ ಪೂಲೀಸರು, ಊರವರನ್ನು ಅಲೆದಾಡಿಸಿದ ಮಹಿಳೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಹುಪತ್ನಿ ವಲ್ಲಭನಾದ ಮಗಳ ಗಂಡ ಮನೆಗೆ ಬಾರದೇ ಇರುವ ಸಿಟ್ಟಿನಿಂದ ಮಗಳು ನಾಪತ್ತೆಯಾಗಿದ್ದಾಳೆನ್ನುವ ನಾಟಕ ಸೃಷ್ಟಿಸಿದ ಮಹಿಳೆಯೊಬ್ಬಳು ಊರವರನ್ನು ಹಾಗೂ ಪೆÇಲೀಸರನ್ನು ಮಗಳ ಪತ್ತೆಗಾಗಿ ಇಡೀ ದಿನ ಅಲೆದಾಡಿಸಿದ ಘಟನೆ ಮಂಜೇಶ್ವರ ಪರಿಸರದಿಂದ ಶನಿವಾರ ವರದಿಯಾಗಿದೆ.

ಮಂಜೇಶ್ವರ ನಿವಾಸಿಯಾದ ಮಹಿಳೆಯೊಬ್ಬಳು ತನ್ನ ಮಗಳ ಗಂಡ ಬರಲಿಲ್ಲವೆಂಬ ಕಾರಣದಿಂದ ಆತನ ಮೇಲಿನ ಸಿಟ್ಟಿನಿಂದ ಮಗಳನ್ನು ಕರ್ನಾಟಕದ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿಸಿ ಅವಳ ಮಗುವನ್ನು ಜತೆಯಾಗಿರಿಸಿ ಮಗಳು ರಾತ್ರಿ ಮನೆಯಲ್ಲಿ ನಿದ್ದೆ ಮಾಡಿದವಳು ಬೆಳಿಗ್ಗೆ ನಾಪತ್ತೆಯಾಗಿರುವುದಾಗಿ ನಾಟಕ ಸೃಷ್ಟಿಸಿದ್ದಾಳೆ. ಇದರಿಂದ ಗಾಬರಿಯಾದ ಊರವರು ಕೂಡಲೇ ಮಂಜೇಶ್ವರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೆÇಲೀಸರು ನಾಟಕ ಸೃಷ್ಟಿಸಿದ ಮಹಿಳೆಯಿಂದ ಮಾಹಿತಿ ಪಡೆದು ಸೈಬರ್  ಸೆಲ್ಲಿಗೆ ಮಾಹಿತಿ ರವಾನಿಸಿದ್ದಾರೆ. ಈಕೆಯ ನಾಟಕವನ್ನು ಅರಿಯದ ಊರವರು ಕೂಡಾ ಹಲವು ಕಡೆ ಹುಡುಕಾಡಿದ್ದಾರೆ.

ನಾಟಕ ಸೃಷ್ಟಿ ಮಾಡಿದ ಮಹಿಳೆಯ ಮನೆಗೆ ವಾಸ್ತವವನ್ನು ಅರಿಯದೆ  ಜನ ಪ್ರವಾಹವೇ ಹರಿದುಬಂದಿದೆ.   ಆದರೆ ರವಿವಾರ ಬೆಳಿಗ್ಗೆ ಊರವರು ಆಗಮಿಸುವಾಗ ನಾಪತ್ತೆಯಾದ ಪುತ್ರಿ ಮನೆಯೊಳಗೆ ಪ್ರತ್ಯಕ್ಷವಾಗಿದ್ದಾಳೆ. ಇದನ್ನು ಪ್ರಶ್ನಿಸಿದಾಗ ತನ್ನ ಮಗಳ ಗಂಡ ಬರದೇ ಇರುವ ಬಗ್ಗೆ ಹಾಗೂ ಆತನನ್ನು ಪ್ರಶ್ನಿಸಲು ಯಾರೂ ತನಗೆ ಸಹಕರಿಸುತ್ತಿಲ್ಲವೆಂಬ ಕಾರಣಕ್ಕೆ ನಾಟಕವಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಈಕೆಯ ಅಳಿಯ ಬಹುಪತ್ನಿ ವಲ್ಲಭನೆನ್ನಲಾಗಿದ್ದು ಆತನಿಗೆ ಮೊದಲೇ ಒಂದು ವಿವಾಹವಾಗಿದ್ದು ಮಕ್ಕಳೂ ಇದ್ದಾರೆಂದು ಹೇಳಲಾಗಿದೆ. ಅದೇ ರೀತಿ ಈಕೆಯ ಮಗಳಿಗೂ ಆತ ಮಗು ಕರುಣಿಸಿದ್ದಾನೆ. ಮೊದಲಿನ ಹೆಂಡತಿಯ ಬಳಿ ಹೋಗಬಾರದೆಂದು ತಾಯಿ, ಮಗಳು ಆತನಲ್ಲಿ ಹೇಳಿದ್ದರೆನ್ನಲಾಗಿದೆ.  ಆದರೆ ಆತ ಅದಕ್ಕೆ  ಸಮ್ಮತಿಸದೇ ಇರುವುದರಿಂದ ಇದೀಗ ಪೆÇಲೀಸರನ್ನೂ ಊರವರನ್ನೂ ಪೇಚಾಟದಲ್ಲಿ ಸಿಲುಕಿಸುವ ನಾಟಕವನ್ನು ಮಹಿಳೆ ಸೃಷ್ಟಿ ಮಾಡಿರುವುದಾಗಿ ಹೇಳಲಾಗಿದೆ.  ಪೆÇಲೀಸರು ಮಹಿಳೆಯ ವಿರುದ್ದವೇ ಕೇಸು ದಾಖಲಿಸುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.