ಹೆರಿಗೆ ಬಳಿಕ ಯುವತಿ ಮೃತ

ಮೃತ ಶ್ವೇತ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಹೆರಿಗೆ ಬಳಿಕ 23ನೇ ದಿನದಂದು ಯುವತಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ. ಮಂಗಲ್ಪಾಡಿ ಅಂಬಾರು ನಿವಾಸಿ ಪ್ರಕಾಶ್-ಮೋಹಿನಿ ದಂಪತಿಯ ಪುತ್ರಿ ಶ್ವೇತ (27) ಮೃತ ಯುವತಿ.
ಮಂಗಳೂರು ಮಂಗಳಾದೇವಿ ನಿವಾಸಿ ಉತ್ಸವ್ ಎಂಬವರ ಪತ್ನಿಯಾದ ಶ್ವೇತ 23 ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಇವರ ಚೊಚ್ಚಲ ಸಿಸೇರಿಯನ್ ಹೆರಿಗೆಯಾಗಿತ್ತು. ಹೆರಿಗೆ ಚಿಕಿತ್ಸೆ ಬಳಿಕ ಅಂಬಾರಿನ ತವರುಮನೆಗೆ ನಾಲ್ಕು ದಿನಗಳ ಹಿಂದೆಯಷ್ಟೇ ಆಗಮಿಸಿದ್ದರು. ಬುಧವಾರ ಸಂಜೆ ಶ್ವೇತರಿಗೆ ಅಸೌಖ್ಯ ಕಂಡುಬಂದಿದ್ದು, ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.