ಮನೆಯೊಳಗೆ ಮಹಿಳೆ ನಿಗೂಢ ಸಾವು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮನೆಯೊಳಗೆ ಮಹಿಳೆಯೊಬ್ಬಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದಾಗಿ ಶಂಕಿಸಲಾಗಿದೆ. ಕಟ್ಟತ್ತಡ್ಕ ಎ ಕೆ ಜಿ ನಗರದ ಮನೆಯೊಳಗೆ ಮನೆಯೊಡತಿ ಆಯಿಷಮ್ಮ (52) ಮೃತ ದುರ್ದೈವಿ.

ಈಕೆ ಏಕಾಂಗಿಯಾಗಿ ಈ ಮನೆಯಲ್ಲಿ ವಾಸಿಸುತಿದ್ದು, ಈಕೆಗೆ ಒಬ್ಬ ಪುತ್ರನಿದ್ದು, ಅತ ಒಂದು ಮದ್ರಸದಲ್ಲಿ ಕಲಿಯುತಿದ್ದಾನೆ. ಇವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಾದವರಾಗಿದ್ದಾರೆ. ಮೂಲತಃ ಕರ್ನಾಟಕದ ಹುಬ್ಬಳ್ಳಿ ಬೀರಿಕ್ಕೆರೆ ನಿವಾಸಿಯಾಗಿದ್ದಾರೆ. ಮೃತ ಆಯಿಷಮ್ಮ ಮನೆಗಳಿಗೆ ತೆರಳಿ ಕೆಲಸ ನಿರ್ವಹಿಸಿ ಜೀವನ ಸಾಗಿಸುತ್ತಿದ್ದರು.  ಸುಮಾರು ಐದು ದಿನದ ಹಿಂದೆ ಪುತ್ರ ಬಾಸಿತ್ ಬಂದು ಮನೆಯಲ್ಲಿ ನೋಡಿದಾಗ ಬಗಿಲು ಮುಚ್ಚಿಕೊಂಡ ಸ್ಥಿತಿಯಲ್ಲಿತ್ತು. ತಾಯಿ ಕೆಲಸಕ್ಕೆ ಹೋಗಿರಬಹುದೆಂದು ಆತ ಹಿಂತಿರುಗಿದ್ದ, ಇದೀಗ ಬಂದಾಗಲೂ ಅದೇ ರೀತಿ ಕಂಡ ಸ್ಥಿತಿಯಲ್ಲಿ ಪುತ್ರ ಕಿಟಕಿಯ ಬಾಗಿಲನ್ನು ಮುರಿದು ಒಳ ನುಗ್ಗಿದಾಗ ಆಯಿಷಮ್ಮ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೆÇಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.