ಬಸ್-ಬೈಕ್ ಡಿಕ್ಕಿ : ಸವಾರ ಸ್ಪಾಟ್ ಡೆತ್

ಅಪಘಾತಕ್ಕೀಡಾದ ಬಸ್, ಮೃತಪಟ್ಟ ಸವಾರ, ಜಖಂಗೊಂಡ ಬೈಕ್.

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಯಲ್ಲಾಪುರ ರಸ್ತೆಯ ಆಶೀಸರ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೈಕ್ ಸವಾರ ಗಣಪತಿ ನಾರಾಯಣ ಭಟ್ಟ ಯಲೂಗಾರ (60) ಅವರು ಶಿರಸಿ ಕಡೆಯಿಂದ ಭೈರುಂಬೆ ಕಡೆ ಹೊರಟಿದ್ದು, ಯಲ್ಲಾಪುರ ಕಡೆಯಿಂದ ಶಿರಸಿಗೆ ಬರುತ್ತಿದ್ದ ಯಲ್ಲಾಪುರ-ಶಿರಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಣಪತಿ ಭಟ್ಟ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸಂಪೂರ್ಣ ಜಖಂ ಆಗಿದೆ. ಗ್ರಾಮೀಣ ಪಿಎಸೈ ಸೀತಾರಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.