ಬರುತ್ತಿದೆ ಮಹಿಳಾಪ್ರಧಾನ ಚಿತ್ರ `ಊರ್ವಿ’

ಇದೀಗ ಮಹಿಳಾಪ್ರಧಾನ ಚಿತ್ರಗಳು ಹೆಚ್ಚು ಹೆಚ್ಚು ಬರುತ್ತಿವೆ. ಬರೀ ಗ್ಲಾಮರ್ ಗೊಂಬೆಗಳಾಗಿ ಹೀರೋ ಜೊತೆ ಮರಸುತ್ತುವ, ಕಷ್ಟದಲ್ಲಿ ಸಿಲುಕಿ ಹೀರೋ ಬಂದು ಕಾಪಾಡುವ ದೃಶ್ಯಕ್ಕಷ್ಟೇ ಸೀಮಿತವಾಗುವ ನಟಿಯರೀಗ ಚಿತ್ರಗಳಲ್ಲಿ ತಾವೇ ಹೀರೋಗಳಾಗಿ ಮಿಂಚುತ್ತಿದ್ದಾರೆ. ಇದೀಗ ಕನ್ನಡದಲ್ಲಿ ಇನ್ನೊಂದು ನಾಯಕಿ ಪ್ರಧಾನ ಚಿತ್ರವೊಂದು ಬರುತ್ತಿದೆ. ಅದರ ಟೀಸರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. `ಉರ್ವಿ’ ಎನ್ನುವ ವಿಶಿಷ್ಟ ಟೈಟಲ್ಲಿನ ಈ ಚಿತ್ರ ಸಿನಿಪ್ರೇಮಿಗಳ ಗಮನ ಸೆಳೆದಿದೆ.
ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಈ ಮೂವರೇ ಚಿತ್ರದ ಪ್ರಮುಖ ಪಾತ್ರಧಾರಿಗಳು. ಪ್ರದೀಪ್ ವರ್ಮಾ ನಿರ್ದೇಶನದ ಈ ಸಿನಿಮಾ ಮೂವರು ವಿಭಿನ್ನ ಸ್ವಭಾವಗಳ ಹುಡುಗಿಯರ ಸುತ್ತ ತಿರುಗುತ್ತವೆ. ಸಿನಿಮಾ ಮುಂದಿನ ಫೆಬ್ರವರಿಯಲ್ಲಿ ತೆರೆಕಾಣುವ ನಿರೀಕ್ಷೆ ಇದೆ.