ಜಮೀನು ವ್ಯಾಜ್ಯ : ಮಹಿಳೆಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಹಳದೀಪುರ ಕರಿಮೂಲೆಯಲ್ಲಿ  ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ಮೇಲೆ 4 ಜನರು ಸೇರಿ ಹಲ್ಲೆ ನಡೆಸಲಾಗಿದೆ. ಹಳದೀಪುರ ಕರಿಮೂಲೆಯ ಪ್ರೇಮಾ ಬಾಳಾ ಖಾರ್ವಿ ಹಲ್ಲೆಗೊಳಗಾದ ಮಹಿಳೆ. ಆರೋಪಿಗಳಾದ ಅನಂತ ದೇವಪ್ಪ ಮೇಸ್ತ, ರಾಮಾ ಅನಂತ ಮೇಸ್ತ, ಪಾಂಡು ದೇವಪ್ಪ ಮೇಸ್ತ, ಉಮಾ ದೇವಪ್ಪ ಮೇಸ್ತ ಎಂಬವರು ಜಮೀನು ವಿಷಯಕ್ಕೆ ಸಂಬಂಧಿಸಿ ದಾರಿ ಅಡ್ಡಗಟ್ಟಿ ಹೊಡೆದು ಅವಾಚ್ಯವಾಗಿ ಬೈದು ಅವಮಾನಗೊಳಿಸಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.