ಹೆಣ್ಣು ಹೆತ್ತದ್ದಕ್ಕಾಗಿ ವರದಕ್ಷಿಣೆ ನೆಪವೊಡ್ಡಿ ಬಾಣಂತಿಗೆ ಹಲ್ಲೆ

ಪಟಿಯಾಲಾ : ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ಬಡಿಗೆಯಿಂದ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬಿನ ಪಟಿಯಾಲಾದಲ್ಲಿ ನಡೆದಿದೆ.

ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬುವವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು, ವರ್ಷಗಳ ಹಿಂದಷ್ಟೇ ಮೀನಾ ದಲ್ಜೀತ್ ಸಿಂಗ್ ಎಂಬುವವರನ್ನು ವಿವಾವವಾಗಿದ್ದರು. ಇತ್ತೀಚೆಗೆ ಮೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಆದರೆ ಹೆಣ್ಣು ಮಗು ಜನಿಸುವುದು ಇಷ್ಟವಿರದ ಮನೆಯವರು, “ಹೆಣ್ಣುಮಗು ಹೆತ್ತಿದ್ದೀಯ, ವರದಕ್ಷಿಣೆ ತರಬೇಕು” ಎಂದು ಮಹಿಳೆಯನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಗಂಡನ ಸಹೋದರರು ಹಾಗೂ ಆವರ ಸ್ನೇಹಿತರು ಮಹಿಳೆಗೆ ಥಳಿಸಿದ್ದು, ನೆರೆಮನೆಯೊಬ್ಬರು ಈ ಥಳಿತ ವಿಡಿಯೋವನ್ನು ತಮ್ಮ ಮೊಬೈಲಿನಲ್ಲಿ ದಾಖಲಿಸಿ ಸಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಹೆಣ್ಣು ಮಗು ಜನಿಸಿದ ಬಳಿಕ ಆಕೆಯನ್ನು ಕುಟುಂಬದೊಳಗೆ ಸೇರಿಸಿಕೊಳ್ಳಲು ಕುಟುಂಬ ನಿರಾಕರಿಸಿದ್ದರಿಂದ ಆಕೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಅದಾಗ್ಯೂ ಆಕೆಯನ್ನು ಬಿಡದ ಗಂಡನ ಸಹೊದರರು ಥಳಿಸಿದ್ದಾರೆ. ವಿಡೊಯೋ ವೈರಲ್ ಆಗುತಿದ್ದಂತೆ ಎಚ್ಚೆತ್ತ ಪೆÇಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು,  ಮೂವರನ್ನು ವಶಕ್ಕೆ ಪಡೆದಿದ್ದಾರೆ.