ಅಬಕಾರಿ ಸಚಿವನ ಜೊತೆ ಸೆಕ್ಸ್ ನಡೆಸಿದ್ದು ನಿಜ ಎಂದ ಮಹಿಳೆ

ಬೆಂಗಳೂರು : ನನ್ನ ಹಾಗೂ ಅಬಕಾರಿ ಸಚಿವ ಎಚ್ ವೈ ಮೇಟಿ ನಡುವೆ ಸೆಕ್ಸ್ ನಡೆದಿರುವುದು ನಿಜ ಎಂದು ಸಂತ್ರಸ್ತೆ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾಳೆ.

“ಸಚಿವರ ಹಾಗೂ ನನ್ನ ನಡುವೆ ನಡೆದಿರುವ ರಾಸಲೀಲೆಯನ್ನು ಡಿಎಆರ್ ಪೆÇಲೀಸ್ ಪೇದೆ ಶುಭಾಶ್ ಮುಗಳಕೋಡ್ ಚಿತ್ರೀಕರಣ ಮಾಡಿಕೊಂಡು ನಮಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ. ನನ್ನ ಜೀವಕ್ಕೆ ಏನೇ ತೊಂದರೆಯಾದರೆ ಪೆÇಲೀಸ್ ಪೇದೆ ಶುಭಾಶ್ ಹಾಗೂ ಸಚಿವರೇ ನೇರ ಹೊಣೆ” ಎಂದು ತಿಳಿಸಿದ್ದಾಳೆ.

ನನ್ನ ಹಾಗೂ ಅಬಕಾರಿ ಸಚಿವ ಮೇಟಿ ನಡುವೆ ಸೆಕ್ಸ್ ನಡೆದಿರುವುದು ನಿಜ ಎಂದು ಸ್ವಂತ ಸಂತ್ರಸ್ತ ಮಹಿಳೆಯೇ ಬಾಯ್ಬಿಟಿದ್ದರೂ ಸಚಿವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿರುವುದೇಕೆ ಎಂದು ಪ್ರತಿಪಕ್ಷಗಳ ಪ್ರಶ್ನಿಸುತ್ತಿವೆ.