ಮಠಗಳಿಗೆ ಭೇಟಿ ನೀಡುತ್ತೇನೆ, ದೇವಾಲಯಕ್ಕಲ್ಲ : ಆಂಜನೇಯ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇವಾಲಯಗಳಿಗೆ ಹೋಗುವ ಅಭ್ಯಾಸ ಇಲ್ಲದಿದ್ದರೂ ಮಠಗಳಿಗೆ ಭೇಟಿ ನೀಡಿ ಅಲ್ಲಿರುವ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ನಗರದ ಉರ್ವಾ ಮಾರಿಗುಡಿ ಸಮೀಪದ ನಿರ್ಮಿಸಲಾದ ಮೆಟ್ರಿಕ್ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

“ದೇವಾಲಯಗಳಿಗೆ ಹೋದರೆ ದೇವರು ಮಾತನಾಡುವುದಿಲ್ಲ. ಮಠಗಳಲ್ಲಿ ಇರುವ ಸ್ವಾಮಿಗಳು ಮಾತನಾಡುತ್ತಾರೆ. ಕಳೆದ ಬಾರಿ ಉಡುಪಿಗೆ ಹೋಗಿದ್ದಾಗ ಕೃಷ್ಣ ಮಠಕ್ಕೆ ಹೋಗಿದ್ದೆ. ಅಲ್ಲಿಯ ಸ್ವಾಮೀಜಿ ದಲಿತ ಕೇರಿಗಳಿಗೆ ಭೇಟಿ ನೀಡಿದ ಸಾಮಾಜಿಕ ಕಳಕಳಿಯುಳ್ಳವರು” ಎಂದು ಸಚಿವ ಆಂಜನೇಯ ಹೇಳಿದರು.

“ಪರಿಶಿಷ್ಟರ ಹಾಡಿಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ಬೇಡಿಕಗಳಿಗೆ ತಕ್ಷಣ ಸ್ಪಂದಿಸಲಾಗುವುದು. ಸ್ಥಳದಲ್ಲೇ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಕುಂದು ಕೊರತೆ ನಿವಾರಿಸಲಾಗುವುದು” ಎಂದು ಆಂಜನೇಯ ನುಡಿದರು.