ಟ್ರಂಪ್ ಪಾಕ್ ಉಗ್ರರ ವಿರುದ್ಧ ಕೈಗೊಳ್ಳುವರೇ ?

  • ಕ್ಯಾಪ್ಟನ್ ಮುರಳಿ ಮೆನನ್

ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಭಾರತದ ಪರವಾದ ನಿಲುವು ವ್ಯಕ್ತಪಡಿಸುವುದು ಖಚಿತವಾದಂತಿದೆ. ಟ್ರಂಪ್ ಅವರ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಜನರಲ್ ಜೆಮ್ಸ್ ಮಾಟಿಸ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು ಅಮೆರಿಕ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಕಠಿಣ ನಿಲುವು ತಾಳುವುದಾಗಿ ಘೋಷಿಸಿದ್ದಾರೆ.

ಮಾಟಿಸ್ ಅವರ ಮಾತಿನ ಧಾಟಿಯನ್ನು ಕೇಳಿದರೆ ಬಹುಶಃ ಹಕ್ಕಾನಿ ಗುಂಪು ಮಾತ್ರವೇ ಅಲ್ಲದೆ ಭಾರತದಲ್ಲಿ ಭಯೋತ್ಪಾದಕತೆಯನ್ನು ಹರಡುತ್ತಿರುವ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತೊಯಿಬಾ ಸಂಘಟನೆಗಳನ್ನೂ ನಿಯಂತ್ರಿಸಲು ಅಮೆರಿಕ ಹವಣಿಸುತ್ತಿದೆ. ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದಷ್ಟೂ ಭಾರತಕ್ಕೆ ಲಾಭವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ಭಯೋತ್ಪಾದನೆ ನಿಗ್ರಹದಲ್ಲಿ ಕ್ರಿಯಾಶೀಲವಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ತಮ್ಮ ಚುನಾವಣಾ ಭಾಷಣದ ಸಂದರ್ಭದಲ್ಲೂ ಟ್ರಂಪ್ ಪಾಕಿಸ್ತಾನ ನೆಲೆಯ ಭಯೋತ್ಪಾದಕರ ವಿರುದ್ಧ ದಾಳಿಯಲ್ಲಿ ಭಾರತದ ನೆರವು ಪಡೆಯುವುದಾಗಿ ಘೋಷಿಸಿದ್ದರು. ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಒಡಂಬಡಿಕೆ ಈಗಾಗಲೇ ಪ್ರಗತಿಯ ಹಂತದಲ್ಲಿದ್ದು  ಇನ್ನೂ ಹೆಚ್ಚಿನ ಪ್ರಮಾಣದ ಎಫ್ 16 ವಿಮಾನ, ಸಿ 17 ಗ್ಲೋಬ್ ಮಾಸ್ಟರ್ಸ್ ಸಿ 130 ಅಪಾಜೆ ಹೆಲಿಕಾಪ್ಟರ್ ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತವನ್ನು ತಲುಪಲಿವೆ. ಅಮೆರಿಕದಲ್ಲಿನ ಈ ಸಕಾರಾತ್ಮಕ ಬದಲಾವಣೆಗಳನ್ನು ಭಾರತ ಸರ್ಕಾರ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವುದು ಅತ್ಯಗತ್ಯ.