ಉಡುಪಿ, ದ ಕ ಜಿಲ್ಲೆಯಲ್ಲಿ ನಡೆಯಲಿದೆ ಐ ಟಿ ದಾಳಿ

ಭ್ರಷ್ಟ ಅಧಿಕಾರಿಗಳಿಗೀಗ `ಮಂಡೆಬೆಚ್ಚ’ ! ಎಲ್ಲಿ ಈ ಹಣ, ಬಂಗಾರ ಬಚ್ಚಿಟ್ಟುಕೊಳ್ಳುವುದೆಂಬ ಭಯ ! ರಾಜಕೀಯ ಪಕ್ಷಗಳ ನೇತಾರರಿಗೆ, ಪುಂಡು ಪುಢಾರಿಗಳಿಗೆ, ದೊಡ್ಡ ವ್ಯಾಪಾರಿಗಳಿಗೆ, ಭೂ ಮಾಫಿಯಾದವರಿಗೆ, ಫೈನಾನ್ಸ್ ಮಾಲೀಕರಿಗೆ, ಮೀಟರ್ ಬಡ್ಡಿ ಕುಳಗಳಿಗೆ, ತೆರಿಗೆ ಕಟ್ಟದ ಬಟ್ಟೆ, ಹಾರ್ಡ್‍ವೇರ್, ಪೇಯಿಂಟ್ ಅಂಗಡಿಗಳಿಗೆ,  ವಾಹನ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ, ಮದ್ಯದಂಗಡಿ ದೊರೆಗಳಿಗೆ, ಖಾಸಗಿ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜ್ ಯಜಮಾನರಿಗೆ, ಧರ್ಮದರ್ಶಿ, ಧರ್ಮಾಧಿಕಾರಿಗಳಿಗೆ, ಆರ್‍ಟಿಓ ಕಂದಾಯ ಪೊಲೀಸ್, ಅರಣ್ಯ, ಲೋಕೋಪಯೋಗಿ ಸರ್ವೇ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ, ನಗರ ಸಭೆ, ಮಹಾನಗರಪಾಲಿಕೆ ಇಂಜಿನಯರ್‍ಗಳಿಗೆ, ಗುತ್ತಿಗೆದಾರರಿಗೆ ಈಗ `ಊಹಿಸಲಾಗದ ¸ಂಕಷ್ಟ’ ಎದುರಾಗಿದೆ.  ಅನೇಕ ಪ್ರತಿಷ್ಠಿತ ವ್ಯಕ್ತಿಗಳಿಗೂ ನಿದ್ದೆ ಹತ್ತುತ್ತಿಲ್ಲ ಎಂಬುದು ಸುಳ್ಳಲ್ಲ. ಚಾರ್ಟರ್ಡ್ ಅಕೌಂಟೆಂಟ್ (ಲೆಕ್ಕ ಪರಿಶೋಧಕರು) ಕಚೇರಿಗಳಿಗೂ `ದಾಳಿ’ ಆಗಬಹುದು ಎನ್ನಲಾಗಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಯವರು ಜಿಲ್ಲೆಯ ಭ್ರಷ್ಟಾಚಾರದಿಂದ ವ್ಯವಹಾರ ಕುದುರಿಸುವ ಸರಕಾರಿ ಕಚೇರಿಗಳ ಅಧಿಕಾರಿಗಳು-ಸಿಬ್ಬಂದಿಗಳು, ಸಾರ್ವಜನಿಕ ವಲಯದ ವ್ಯಾಪಾರಸ್ಥರು ಎಲ್ಲೆಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವರೆಂಬ ಬಗ್ಗೆ ತೀವ್ರ ಶೋಧನೆ ಮಾಡಬೇಕಲ್ಲವೇ ? ಐಟಿ ಅಧಿಕಾರಿಗಳು ದೇಶದ ತೆರಿಗೆ ಕಳ್ಳರನ್ನು, ಭ್ರಷ್ಟರನ್ನು, ಅಕ್ರಮ ಸಂಪತ್ತು ಕೂಡಿಟ್ಟವರ ವಿರುದ್ಧ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಜಿಲ್ಲಾಡಳಿತವು ಸಮರ್ಪಕ ರಕ್ಷಣೆಯನ್ನು ಐ ಟಿ ಅಧಿಕಾರಿಗಳಿಗೆ ನೀಡಬೇಕು. ಪ್ರಧಾನಿ ಕಚೇರಿಗಳಿಗೆ ಈಗಾಗಲೇ ಅನೇಕರು ಕಾಳಧನ ಹೊಂದಿರುವವರ ವಿವರ ರವಾನಿಸಿದ್ದಾರೆನ್ನಲಾಗಿದೆ.

  • ಕೆ ವಾಸುದೇವ, ಪುತ್ತೂರು