ಆರ್ ಎಂ ಎಕ್ಸ್ ಸಿಮೆಂಟ್ ಮಿಕ್ಸ್ ಎದುರು ಹೊಂಡ ಮುಚ್ಚುವಿರಾ

ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಆರ್ ಎಂ ಎಕ್ಸ್ ಸಿಮೆಂಟ್ ಮಿಕ್ಸ್ ಕಂಪನಿ ಗೇಟಿನ ಎದುರು ಭಯಾನಕ ಹೊಂಡ ಬಿದ್ದ ಪರಿಣಾಮ ರಸ್ತೆ ಸಂಚಾರ ಅಸಾಧ್ಯವಾಗಿದೆ. ಅದೇ ರೀತಿ ಈ ಹೊಂಡ ಬಿದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಅನಧಿಕೃತ ವೇಬ್ರಿಜ್ ಹಲವಾರು ವರ್ಷದಿಂದ ಕೈಗಾರಿಕಾ ಪ್ರದೇಶಕ್ಕೆ ವಕ್ಕರಿಸಿ ಇಲ್ಲಿನ ರಸ್ತೆಯನ್ನು ಪೂರಾ ಆಹುತಿ ಪಡೆದುಕೊಂಡಿದೆ. ಇಷ್ಟಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ವೇ ಬಿಜ್ಜಿಗೆ ತೂಕ ಮಾಡಲು ಬರುವ ಘನ ಗಾತ್ರದ ಲಾರಿಗಳು ಓಡಾಡಿ ರಸ್ತೆಯಲ್ಲಿ ಎಲ್ಲಿ ನೋಡಿದರೂ ಧೂಳು ತುಂಬಿ ಕಾಲಿಡಲು ಅಸಾಧ್ಯವಾಗಿದೆ. ರಸ್ತೆಯಲ್ಲಿ ಎಲ್ಲಿ ನೋಡಿದರೂ ಧೂಳು, ಹೊಂಡಗಳದ್ದೇ ಕಾರುಬಾರು. ಆದರೂ ಸಂಚಾರವೇ ಅಸಾಧ್ಯವಾದ ರಸ್ತೆ ಹೊಂಡವನ್ನು ತಪ್ಪಿಸಿಕೊಂಡು ವಾಹನ ಎದ್ದು ಬಿದ್ದು ಹೋಗುವುದನ್ನು ಕಾಣುವಾಗ ಅಯ್ಯೋ ಅನ್ನಿಸುತ್ತಿದೆ. ಕಾರ್ಮಿಕರು ವಿಧಿಯಿಲ್ಲದೇ ಈ ಧೂಳು ತುಂಬಿದ ರಸ್ತೆಯಲ್ಲಿ ಹೋಗಿ ಬರಬೇಕಾಗಿದೆ. ಒಟ್ಟಿನಲ್ಲಿ ಕೈಗಾರಿಕಾ ಪ್ರದೇಶ ಅವ್ಯವಸ್ಥೆ ಸರಿಯಾಗುವ ಸೂಚನೆ ಕಾಣುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಇದ್ದೂ ಇಲ್ಲದಂತಾಗಿದೆ. ಬೇಸಿಗೆಯಲ್ಲಿಯೇ ಹೊಂಡ ಬಿದ್ದ ರಸ್ತೆ ಸರಿಮಾಡದವರು ಇನ್ನು ಮಳೆಗಾಲದಲ್ಲಿ ಸರಿ ಮಾಡಲು ಸಾಧ್ಯವೇ ಒಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವ್ಯವಸ್ಥೆಯನ್ನು ಸರಿಪಡಿಸುವವರು ಯಾರು

  • ಟಿ ಕೆ ಹಮೀದ್  ಅಂಗರಗುಂಡಿ