ತೆಲುಗಿನವರಿಗೂ ಇಷ್ಟವಾಗಬಹುದಾ `ಮಮ್ಮಿ’…

ಪ್ರಿಯಾಂಕ ಉಪೇಂದ್ರ ಮತ್ತು ಯುವಿನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಮಮ್ಮಿ ಎಂಬ ಹಾರರ್ ಚಿತ್ರ ಸ್ಯಾಂಡಲ್ವುಡ್ಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗಲಿದ್ದು ಅಲ್ಲಿಯ ಜನರು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಿದೆ.
ಟಾಲಿವುಡ್ಡಿನಲ್ಲಿ `ಚಿನ್ನಾರಿ’ ಹೆಸರಿನಲ್ಲಿ ಈ ಸಿನಿಮಾ ಡಿಸೆಂಬರ್ 16ರಂದು ಆಂಧ್ರಪ್ರದೇಶದ ಸುಮಾರು 200 ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ತೆಲುಗಿನಲ್ಲಿ ಟ್ರೇಲರ್ ಲಾಂಚ್ ಆಗಿದ್ದು, ಭರ್ಜರಿ ಹಿಟ್ ಆಗಿದೆ.
`ಮಮ್ಮಿ’ ಚಿತ್ರದ ಯಶಸ್ಸಿನಿಂದ ನವ ನಿರ್ದೇಶಕ ಲೋಹಿತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ತೆಲುಗಿನಲ್ಲೂ ಹಿಟ್ ಆಗುವ ಭರವಸೆ ಅವರಿಗಿದೆ. ಇದಲ್ಲದೇ ತಮಿಳಿನಲ್ಲೂ ಇದನ್ನು ಮಾಡಲು ಜ್ಯೋತಿಕಾ ರೆಡಿಯಾಗಿದ್ದಾಳೆ. ಅಂತೂ ನಿರ್ದೇಶಕನಾಗಿ ಲೋಹಿತ್ ಸ್ಥಾನ ಸೌತ್‍ನಲ್ಲಿ ಗಟ್ಟಿಗೊಳ್ಳಲಿದೆ.