ಇಂತಹ ಕಲಾವಿದರೂ ಕಟೀಲು ದೇವಿ ಸೇವೆ ಮಾಡುವವರೇ

ಕಟೀಲು ಸೇವೆಯಾಟದ ಮೇಳ ಹೊರಟಿದೆ ತಿರುಗಾಟಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಆ ದಿನಗಳು ಇನ್ನೇನು ಹತ್ತಿರವಾಯಿತೆಂದು ಕಲಾಭಿಮಾನಿಗಳಿಗೆ ಆದರೆ ಅಷ್ಟರಲ್ಲೇ ಐದನೇ ಮೇಳದ ಕಲಾವಿದರಿಂದ ಭಾರೀ ವಿವಾದ ಸೃಷ್ಟಿಯಾಯಿತು ಈ ಕಲಾವಿದರು ಕಟೀಲು ದೇವಿಯ ಸೇವೆ ಮಾಡುತ್ತಿದ್ದಾರೆಯೇ ಅಥವಾ ಪ್ರತಿಷ್ಠೆಗಾಗಿ ವೇಷ ಹಾಕುತ್ತಿದ್ದಾರೆಯೇ ತಿಳಿಯುತ್ತಿಲ್ಲ ಒಂದು ತಾಯಿಯ ಮಕ್ಕಳಲ್ಲಿ ಬೇಧವುಂಟೇ ನಾವೇ ಕಚ್ಚಾಡಿಕೊಂಡರೆ ಅದು ತಾಯಿಗೆ ಮಾಡುವ ದ್ರೋಹ ಎಂಬ ಸಾಮಾನ್ಯ ಜ್ಞಾನವಿಲ್ಲದ ಈ ಕಲಾವಿದರ ತಂಡ ನಿಜಕ್ಕೂ ಕಟೀಲು ಮೇಳಕ್ಕೆ ಅಗತ್ಯವೇ ಸೇವೆಯಾಟದಲ್ಲೂ ಮಕ್ಕಳಾಟಿಕೆ ಪ್ರದರ್ಶಿಸಿ ಕಟೀಲು ದೇವಿ ಸೇವೆಯಿಂದ ದೂರವಾಗಬೇಡಿ ದುರಹಂಕಾರ ಯಾವತ್ತೂ ಒಳ್ಳೆಯದಲ್ಲ

  • ಸುರೇಶ್  ಎಕ್ಕಾರು ಕಟೀಲು