`ಪಂಚನಾಮೆ ವರದಿ ಬಂದ್ಮೇಲೆ ಮಾತಾಡ್ತೀನಿ’

ಬೆಂಗಳೂರು : “ಪಂಚನಾಮೆ ವರದಿ ಬಂದ್ಮೇಲೆ ನಾನು ಮಾತಾಡ್ತೀನಿ. ನಾನು ಕಾನೂನಿನ ಯಾ ಸಂವಿಧಾನದ ವಿರುದ್ಧ ಏನನ್ನೂ ಮಾಡಿಲ್ಲ. ನಾನು ಹಾಗೆ ಮಾಡುವ ವ್ಯಕ್ತಿಯೂ ಅಲ್ಲ” – ಹೀಗೆಂದು ತಾಳ್ಮೆಯಿಂದ ನುಡಿದವರು ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್. ಮೂರು ದಿನಗಳ ಕಾಲ ತಮ್ಮ ಮನೆ ಮತ್ತು ಸಂಬಂಧಿಕರ ಮತ್ತು ಸಮೀಪವರ್ತಿಗಳ 60 ಕಚೇರಿಗಳ ಮೇಲೆ ರಾಜ್ಯಾದ್ಯಂತ ನಡೆದ ಐಟಿ ದಾಳಿಗಳ  ನಂತರ ಪ್ರಪ್ರಥಮವಾಗಿ ತಮ್ಮ ಮನೆಯಿಂದ ಶನಿವಾರ ಹೊರಗೆ ಕಾಣಿಸಿಕೊಂಡ ಶಿವಕುಮಾರ್ ಶಾಂತರಾಗಿದ್ದಂತೆ ಕಂಡು ಬಂದಿತ್ತಲ್ಲದೆ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿ  ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳಿಗೆ ಸಂಬಂದಿಸಿದ ಪಂಚನಾಮೆ ವರದಿ ಬಂದ ನಂತರ  ಮಾತನಾಡುವುದಾಗಿ ಹೇಳಿದರು.