ಕರ್ತವ್ಯನಿರತ ವೈದ್ಯರಿಗೆ ಸಂಸದ ಹಲ್ಲೆ ತನಿಖೆ ಹಳ್ಳ ಹಿಡಿಯಬಹುದೇ

ಪ್ರಕರಣ ನಡೆದು ತುಂಬಾ ಸಮಯದ ನಂತರ ಕೊನೆಗೂ ಶಿರಸಿ ಪೊಲೀಸರು ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಕೇಸು ಜಡಿದರು. ಈ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲದಂತಿದೆ. ಇದರ ತನಿಖೆ ಮುಂದುವರಿಯದೇ ಹಳ್ಳ ಹಿಡಿಯಲೂಬಹುದು. ರಾಜಕೀಯ ಹೀಗೆ ಇರುತ್ತದೆ ಎಂದು ಹೇಳಲು ಅಸಾಧ್ಯ. ನಾವು ಬಹಿರಂಗವಾಗಿ ಆ ಪಕ್ಷ, ಈ ಪಕ್ಷ ಎಂದು ಜಗಳವಾಡುತ್ತಿದ್ದರೆ ಚುನಾಯಿತರಾದವರು ಒಟ್ಟಾಗಿ ಹೇಗೆ ಪ್ರಜೆಗಳನ್ನು ಮೋಸ ಮಾಡುವುದು ಎಂದೇ ಯೋಚಿಸುತ್ತಾರೆ. ಈ ಹಲ್ಲೆ ವಿಚಾರದಲ್ಲಿ ಅನಂತ ಕುಮಾರರನ್ನು ಸಿಲುಕಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡಬಹುದು. ಅದು ಸಾಧ್ಯವಾದರೆ ವೈದ್ಯರ ಮೇಲೆ ಹಲ್ಲೆ ನಡೆದದ್ದೇ ಸುಳ್ಳು ಎಂದು ಸಾಬೀತಾಗಬಹುದು. ಈ ಕೇಸನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಿ ಸಂಸದರಿಗೆ ಶಿಕ್ಷೆ ಆಗುವಂತೆ ಮಾಡುವವರ್ಯಾರು

  • ಅರುಣಕುಮಾರ್, ಉಡುಪಿ.