ಕರ್ನಾಟಕದಲ್ಲಿ ಕನ್ನಡ ಉಳಿಯಬಹುದೆ

ಕರ್ನಾಟಕದ ಏಕೀಕರಣದಿಂದ ಆರಂಭಿಸಿ ಕನ್ನಡಕ್ಕಾಗಿ ಕನ್ನಡ ಭಾಷಾಂದೋಲನದವರೆಗೂ ಕರ್ನಾಟಕ ಕನ್ನಡಿಗರದ್ದೆಂದು ಬೊಬ್ಬೆ ಹಾಕುತ್ತಿದ್ದ ಕನ್ನಡಿಗರಿಗೇ ಇಂದು ಕನ್ನಡ ಭಾರವಾದಂತಿದೆ ಅಂತಜಾರ್ಲದಲ್ಲಿ ಕನ್ನಡವು ತೀರಾ ಅವಗಣಿಸಲ್ಪಟ್ಟಿದೆ ಕನ್ನಡ ಗೊತ್ತಿದ್ದರೂ ಇಂಗ್ಲಿಷ್ ಲಿಪಿ ಬಳಸಬಹುದಾದ ಅನಿವಾರ್ಯತೆ ಬಂದೊದಗಿದೆ ಕರ್ನಾಟಕದ ಭಾಷೆಯಾದ ಕನ್ನಡವನ್ನು ಸರಕಾರವು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಕನ್ನಡ ಅನುಷ್ಠಾನಕ್ಕೆ ಸೂಚನೆಗಳನ್ನು ಮಾತ್ರ ನೀಡಲಾಗುತ್ತಿದೆ ಅನುಷ್ಠಾನವಾಗುತ್ತಿಲ್ಲವೆಂಬುದು ಸತ್ಯ ಸಂಗತಿಯಾಗಿದೆ ಮುನ್ನೂರಕ್ಕಿಂತ ಹೆಚ್ಚು ಆದೇಶಗಳೂ ನಿರ್ದೇಶನಗಳೂ ಹೊರ ಬಂದಿದ್ದರೂ ಕನ್ನಡದ ಬಳಕೆಗೆ ಹಿನ್ನಡೆಯಾಗುತ್ತಿರುವುದು ವಿಪರ್ಯಾಸವೇ ಸರಕಾರದ ಜಾಹೀರಾತುಗಳು, ಟೆಂಡರು ಅಧಿಸೂಚನೆಗಳು ಕೂಡಾ ಕನ್ನಡ ಪತ್ರಿಕೆಗಳಲ್ಲೂ ಇಂಗ್ಲಿಷಿನಲ್ಲೇ ಕಾಣುವುದು ಕನ್ನಡ ಬಳಕೆಯ ಅಧಃಪತನವನ್ನು ಸೂಚಿಸುತ್ತದೆ. ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಅಸಾಧ್ಯವೆಂಬಂತಿದೆ ನ್ಯಾಯಾಧೀಶರೂ ವಕೀಲರೂ ಕನ್ನಡಿಗರೇ ಆಗಿದ್ದರೂ ನ್ಯಾಯಾಲಯದ ದಾಖಲೆಗಳು ಕನ್ನಡದಲ್ಲಿರುವುದಿಲ್ಲ. ಇದು ವಿಪರ್ಯಾಸವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಸಿದ್ಧಲಿಂಗಯ್ಯನವರು ಎಚ್ಚರಿಕೆಯ ಸೂಚನೆ ನೀಡಿದ್ದರೂ ಕನ್ನಡ ಸಂಸ್ಕøತಿ ಮತ್ತು ಅಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳಿಗೆ ಕನ್ನಡ ಕಬ್ಬಿಣದ ಕಡಲೆಯಾಗಿದೆ. ಜನಜೀವನದೊಡನೆ ಸಂಪರ್ಕ ಭಾಷೆಯಾಗಿ ಬೆಳೆಯಬೇಕಾದ ಕನ್ನಡ ಭಾಷೆಗೆ ಕರ್ನಾಟಕದಲ್ಲೇ ಬೆಂಬಲವಿದ್ದಂತಿಲ್ಲ. ಕನ್ನಡ ವ್ಯವಹಾರ ಭಾಷೆಯಾಗಿ ರಾಜ್ಯ ಭಾಷೆಯಾಗಿ ಉಳಿಸಬೇಕಾದ ದೃಢ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬೇಕಾಗಿದೆ ಸರಕಾರ ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜನಸಾಮಾನ್ಯರು ಸಾರ್ವಜನಿಕ ಸಭೆಗಳಲ್ಲಿ ಕನ್ನಡವನ್ನೇ ಬಳಸಬೇಕು ಎಲ್ಲಾ ಇಲಾಖೆಗಳಲ್ಲೂ ವ್ಯವಹಾರ ಭಾಷೆ ಕನ್ನಡದಲ್ಲೇ ಇರಬೇಕೆಂಬ ಸುತ್ತೋಲೆ ಸರಕಾರ ನೀಡಬೇಕು ಆಡು ಭಾಷೆಗಳ ಅಭಿವೃದ್ಧಿಗಾಗಿ ಬಹಳಷ್ಟು ಹಣ ನೀಡಿ ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ ತುಳು ಅಕಾಡೆಮಿ ಕೊಂಕಣಿ ಅಕಾಡೆಮಿ ಬ್ಯಾರಿ ಅಕಾಡೆಮಿ ಕೊಡವ ಅಕಾಡೆಮಿ ಅರೆಭಾಷಾ ಅಕಾಡೆಮಿ ಮುಂತಾದ ಅಕಾಡೆಮಿಗಳು ತಂತಮ್ಮ ಭಾಷೆಯೇ ಕರ್ನಾಟಕದ ಭಾಷೆಯೆಂಬಂತೆ ಬಿಂಬಿಸುತ್ತದೆ ಸಾರ್ವಜನಿಕ ಸಭೆಗಳಲ್ಲೂ ಕನ್ನಡ ಮಾಯವಾಗಿ ಆಯಾ ನಾಡು ನುಡಿಗಳೇ ಬಳಕೆಯಾಗುತ್ತಿದೆ ಕರ್ನಾಟಕದಲ್ಲಿ ಕನ್ನಡವನ್ನು ಅಳಿಸುವ ಯತ್ನ ಇದಾಗಿದೆ ಈ ಭಾಷಾ ಅಕಾಡೆಮಿಗಳೇ ಕನ್ನಡವನ್ನು ಮಾತ್ರವಲ್ಲ ಕರ್ನಾಟಕವನ್ನೇ ಛಿದ್ರಗೊಳಿಸಬಹುದಾದ ಅಪಾಯ ಮುಂದೆಯಿದೆ ಈಗಾಗಲೇ ತೆರೆಮರೆಯಲ್ಲಿ ಆರಂಭವಾಗಿರುವ ತುಳುನಾಡು ಕೊಂಕಣಿನಾಡು ಕೊಡವನಾಡು ಬೆಳೆಯ ತೊಡಗಿದರೆ ಕರ್ನಾಟಕದ ಛಿದ್ರವಾಗುವುದು ಆಗ ಬ್ಯಾರಿನಾಡು ಎಂಬ ಕೂಗು ಬರುವ ಸಾಧ್ಯತೆಯಿದೆ ಕರ್ನಾಟಕಕ್ಕೆ ಸರಕಾರ ನೀಡುವ ಕೋಟಿಗಟ್ಟಲೆ ಹಣದಿಂದಲೇ ಈ ಅಕಾಡೆಮಿಗಳು ಬೆಳೆಯುತ್ತಿದ್ದು ಕನ್ನಡಕ್ಕೆ ಮಾತ್ರವಲ್ಲ ಕರ್ನಾಟಕಕ್ಕೇ ಅಪಾಯ ಬರಬಹುದಾದ ಪರಿಸ್ಥಿತಿಗೆ ಪ್ರೋತ್ಸಾಹಿಸುತ್ತಿದೆ ಈ ಆಪತ್ತು ಬರುವ ಮೊದಲೇ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು

  • ಪಿ ಕೆ ಸಂಶುದ್ದೀನ್  ವಕೀಲರು ಉಳ್ಳಾಲ ಮಂಗಳೂರು