ರಾಮ ಮಂದಿರ ನಿರ್ಮಾಣ ವಿರೋಧಿಗಳ ಶಿರಚ್ಛೇದನ ಮಾಡುವೆ : ಬಿಜೆಪಿ ಶಾಸಕ

ಹೈದರಾಬಾದ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿರೋಧ ವ್ಯಕ್ತಪಡಿಸುವವರ ಶಿರಚ್ಛೇದನ ಮಾಡುವೆ ಎಂದಿರುವ ಹೈದರಾಬಾದ್ ಬಿಜೆಪಿ ಶಾಸಕ ರಾಜ ಸಿಂಗ್ ಹೇಳಿಕೆ ಈಗ ಭಾರೀ ವಿವಾದ ಸೃಷ್ಟಿಸಿದೆ. “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮುಂದಾದರೆ ಕೋಲಾಹಲ ಸೃಷ್ಟಿಸಲಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಥವರಿಗೆ ನಾನು ತಕ್ಕ ಪಾಠ ಕಲಿಸಲಿದ್ದೇನೆ. ಅಂತಹ ನೀಚರಿಗಾಗಿ ನಾವು ವರ್ಷಗಳಿಂದ ಕಾಯುತ್ತಿದ್ದೇವೆ” ಎಂದವರು ಸಾರ್ವಜನಿಕ ಸಭೆಯೊಂದರಲ್ಲಿ ಗುಡುಗಿದ್ದಾರೆ.