ಮಿಲ್ಕ್ ಮ್ಯಾನ್ ಆಗಲಿದ್ದಾನಾ ಅಕ್ಷಯ್?

ಅಕ್ಷಯ್ ಕುಮಾರ್ ಈಗಾಗಲೇ `ಪ್ಯಾಡ್ ಮ್ಯಾನ್’ ಆಗಿ ಮಿಂಚಿಯಾಗಿದೆ. ಇನ್ನೀಗ ಆತ `ಮಿಲ್ಕ್ ಮ್ಯಾನ್’ ಆಗಲು ಹೊರಟಂತಿದೆ. ಮೂಲಗಳ ಪ್ರಕಾರ ಏಕ್ತಾ ಕಪೂರ್ ಭಾರತದಲ್ಲಿ ಕ್ಷೀರ ಕ್ರಾಂತಿಯೆಬ್ಬಿಸಿರುವ ಡಾ ವರ್ಗೀಸ್ ಕುರಿಯನ್ ಕುರಿತಾಗಿನ ಬಯೋಗ್ರಫಿ `ಐ ಟೂ ಹ್ಯಾಡ್ ಅ ಡ್ರೀಮ್’ ಪುಸ್ತಕದ ಹಕ್ಕನ್ನು ಸಿನಿಮಾ ಮಾಡಲು ಪಡೆದಿದ್ದಾಳೆ. ಆಕೆ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು `ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ಡೈರೆಕ್ಟರ್ ಶ್ರೀ ನಾರಾಯಣ ಸಿಂಗ್ ಅವರಿಗೆ ವಹಿಸಲು ಬಯಸಿದ್ದಾಳೆ. ಅವರು ಈ ಚಿತ್ರದ ನಾಯಕನ ಪಾತ್ರಕ್ಕಾಗಿ ತನ್ನ ಮೊದಲ ಚಿತ್ರದ ಹೀರೋ ಅಕ್ಷಯ್ ಕುಮಾರನನ್ನೇ ಸಂಪರ್ಕಿಸುವ ಸಾಧ್ಯತೆ ಇದೆ.

ವರ್ಗೀಸ್ ಅವರ ಬಗ್ಗೆ ಮಾತಾಡುತ್ತಾ ನಾರಾಯಣ್ ಸಿಂಗ್ “ವರ್ಗೀಸ್ ಬರೀ ಲಾಭ ನಷ್ಟದ ಬಗ್ಗೆ ಯೋಚಿಸದೇ ಅವರು ರೈತರ ಅದರಲ್ಲೂ ಮಹಿಳಾ ಸಬಲೀಕರಣಕ್ಕೂ ಬಹಳಷ್ಟು ಒತ್ತು ನೀಡಿದ್ದಾರೆ. ಅವರೊಬ್ಬರು ಮಾನವತಾವಾದಿ. ಅವರ ದೂರದರ್ಶಿತ್ವ ಇಂದು ಕ್ಷೀರ ಕ್ರಾಂತಿಯನ್ನೇ ಎಬ್ಬಿಸಿದೆ” ಎನ್ನುತ್ತಾರೆ. ಅಕ್ಷಯ್ ಈಗಾಗಲೇ ಸಾಮಾಜಿಕ ಕಳಕಳಿ ಇರುವ ಪಾತ್ರದಲ್ಲಿ ನಟಿಸಿ ಬಾಕ್ಸಾಫೀಸಿನಲ್ಲೂ ಭರ್ಜರಿ ಕಲೆಕ್ಷನ್ ತಂದುಕೊಟ್ಟಿರುವುದರಿಂದ ಸಹಜವಾಗಿಯೇ ವರ್ಗೀಸ್ ಪಾತ್ರಕ್ಕೆ ಆತನೇ ಸಿನಿಮೇಕರ್ಸ್ ಮೊದಲ ಆಯ್ಕೆ. ಅಕ್ಷಯ್ ಕೂಡಾ ಈ ಚಿತ್ರಕ್ಕೆ `ಅಟ್ಟರ್ಲಿ ಬಟ್ಟರ್ಲಿ ಡೆಲಿಶಿಯಸ್’ ದರವನ್ನೇ ಚಾರ್ಜ್ ಮಾಡಬಹುದು ಎನ್ನುತ್ತಾರೆ ಸಿನಿಪಂಡಿತರು.

LEAVE A REPLY